ಕರ್ನಾಟಕ

karnataka

ETV Bharat / state

ಮಂಡ್ಯದಿಂದ ನನ್ನೆದುರು ಸಚಿವ ಚಲುವರಾಯಸ್ವಾಮಿ ಸ್ಪರ್ಧಿಸಿದರೆ ಒಳ್ಳೆಯದು: ಮಾಜಿ ಶಾಸಕ ಸುರೇಶ್​ ಗೌಡ - ಈಟಿವಿ ಭಾರತ ಕನ್ನಡ

ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ನಿಖಿಲ್​ ಕುಮಾರಸ್ವಾಮಿ ನಿಲ್ಲದಿದ್ದರೆ, ನಾನೇ ಸ್ಪರ್ಧಿಸುತ್ತೇನೆ ಎಂದು ಮಾಜಿ ಶಾಸಕ ಸುರೇಶ್​ ಗೌಡ ಹೇಳಿದರು.

Former MLA Suresh Gowda talks about Lok Sabha election
ಮಂಡ್ಯದಿಂದ ನನ್ನೆದುರು ಸಚಿವ ಚಲುವರಾಯಸ್ವಾಮಿ ಸ್ಪರ್ಧಿಸಿದರೆ ಒಳ್ಳೆಯದು: ಮಾಜಿ ಶಾಸಕ ಸುರೇಶ್​ ಗೌಡ

By ETV Bharat Karnataka Team

Published : Dec 12, 2023, 8:52 PM IST

ಮಂಡ್ಯದಿಂದ ನನ್ನೆದುರು ಸಚಿವ ಚಲುವರಾಯಸ್ವಾಮಿ ಸ್ಪರ್ಧಿಸಿದರೆ ಒಳ್ಳೆಯದು: ಮಾಜಿ ಶಾಸಕ ಸುರೇಶ್​ ಗೌಡ

ಮಂಡ್ಯ : ಮುಂದಿನ ಲೋಕಸಭೆ ಚುನಾವಣೆಗೆ ಮಂಡ್ಯದಿಂದ ನಿಖಿಲ್​ ಕುಮಾರಸ್ವಾಮಿ ಅವರೇ ಸ್ಪರ್ಧೆ ಮಾಡಬೇಕು. ಒಂದು ವೇಳೆ ಅವರು ನಿರಾಕರಿಸಿದರೆ ನಾನೇ ಅಭ್ಯರ್ಥಿಯಾಗಿ ನಿಲ್ಲುತ್ತೇನೆ. ನನ್ನ ಎದುರು ಸಚಿವ ಚಲುವರಾಯಸ್ವಾಮಿ ಅವರೇ ಸ್ಪರ್ಧಿಸಬೇಕು. ಜನ ನನ್ನನ್ನು ಮತ್ತೆ ನಿರಾಕರಿಸಿದರೆ ರಾಜಕೀಯವಾಗಿ ಒಂದು ನಿರ್ಧಾರವನ್ನು ತೆಗೆದುಕೊಳ್ಳಲು ತಯಾರಿದ್ದೇನೆ ಎಂದು ಮಾಜಿ ಶಾಸಕ ಸುರೇಶ್​ ಗೌಡ ಹೇಳಿದರು.

ಇಂದು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ನಿಖಿಲ್​ ಕುಮಾರಸ್ವಾಮಿ ಅವರು ಲೋಕಸಭೆ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದಲೇ ಸ್ಪರ್ಧಿಸಬೇಕು ಎಂಬುದು ಎಲ್ಲರ ಒಕ್ಕೊರಲ ಅಭಿಪ್ರಾಯ. ಕುಮಾರಸ್ವಾಮಿ ಅವರು ಈ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸಬೇಕು. ಕಳೆದ ಬಾರಿ ನಿಖಿಲ್​ ಕುಮಾರಸ್ವಾಮಿ ಅವರು ಕಡಿಮೆ ಅಂತರದಲ್ಲಿ ಸೋತಿದ್ದಾರೆ. ರಾಮನಗರದಲ್ಲೂ ಷಡ್ಯಂತ್ರಗಳಿಂದ ಸೋಲು ಕಂಡಿದ್ದಾರೆ. ನಮಗೆ ಕೃತಜ್ಞತೆ ಇದ್ದು ಅವರೇ ನಿಲ್ಲಬೇಕು ಎಂಬುದು ಎಲ್ಲರ ಒತ್ತಾಯವಾಗಿದೆ. ಈ ಬಗ್ಗೆ ವರಿಷ್ಠರ ಗಮನಕ್ಕೂ ತರಲಾಗಿದೆ. ಅವರು ಈ ಬಗ್ಗೆ ಪರಶೀಲಿಸಿ ನಿರ್ಧಾರ ಮಾಡಬೇಕಷ್ಟೆ. ನಿಖಿಲ್​ ಅವರೇ ಮಂಡ್ಯದ ಅಭ್ಯರ್ಥಿ ಆಗಬೇಕು" ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ನಾನು ಟಿಕೆಟ್​ ಆಕಾಂಕ್ಷಿ.. "ನಿಖಿಲ್​ ಕುಮಾರಸ್ವಾಮಿ ಅವರು ಮಂಡ್ಯದಿಂದ ಸ್ಪರ್ಧಿಸದೇ ಇದ್ದರೆ, ನಾನೂ ಒಬ್ಬ ಟಿಕೆಟ್​ ಆಕಾಂಕ್ಷಿಯಾಗಿದ್ದೇನೆ. ನಮ್ಮ ಮೊದಲ ಆದ್ಯತೆ ನಿಖಿಲ್​ ಕುಮಾರಸ್ವಾಮಿ ಅವರೇ. ಅವರು ನಿಲ್ಲಲ್ಲ ಎಂದಾಗ ನಾನು ಆಕಾಂಕ್ಷಿ. ಬಿಜೆಪಿ, ಜೆಡಿಎಸ್​ ನಡುವೆ ಹೊಂದಾಣಿಕೆಯಾಗಿ ನಮಗೆ ಬಿಟ್ಟು ಕೊಟ್ಟರೆ ನಾವು ಕ್ಲೈಮ್​ ಮಾಡುತ್ತೇವೆ. ಎಲ್ಲೆಲ್ಲಿ ಜೆಡಿಎಸ್​ ಬಲಿಷ್ಠವಾಗಿದೆಯೋ, ಈ ಎಲ್ಲಾ ಬಗ್ಗೆ ನಮ್ಮ ವರಿಷ್ಠರು ತೀರ್ಮಾನ ಮಾಡುತ್ತಾರೆ" ಎಂದರು.

ನನ್ನ ವಿರುದ್ಧ ಚಲುವರಾಯಸ್ವಾಮಿ ನಿಂತರೆ ಉತ್ತಮ:"ನಾನು ಅಭ್ಯರ್ಥಿಯಾಗಿ ನಿಂತಲ್ಲಿ ನನ್ನ ವಿರುದ್ಧ ಸಚಿವ ಚಲುವರಾಯಸ್ವಾಮಿ ಸ್ಪರ್ಧಿಸಿದರೆ ಒಳ್ಳೆಯದು. ಅವರ ಆಡಳಿತವನ್ನು ಜನರು ಒಪ್ಪಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಅಭಿವೃದ್ಧಿ ಅನ್ನೋದು ಯದ್ಧೋಪಾದಿಯಲ್ಲಿ ನಡೆಯುತಿದೆ. ಅವರಿಗಿಂತ ಜಿಲ್ಲೆಯಲ್ಲಿ ಸಮರ್ಥ ನಾಯಕರಿಲ್ಲ. ಜಿಲ್ಲೆಯಲ್ಲಿ ಕಾಂಗ್ರೆಸ್​ ಉಳಿದಿರುವುದೇ ಅವರಿಂದ. ನನಗೆ ಅವರ ವಿರುದ್ಧವೇ ಸ್ಪರ್ಧಿಯಾಗಿ ನಿಲ್ಲಬೇಕು ಎಂಬುದು ಆಸೆ. ಜನರು ನನ್ನನ್ನು ಮತ್ತೊಮ್ಮೆ ತಿರಸ್ಕಾರ ಮಾಡಿದ್ರೆ ರಾಜಕೀಯವಾಗಿ ನಾನೊಂದು ನಿರ್ಧಾರವನ್ನು ತೆಗೆದುಕೊಳ್ಳಬಹುದು. ಅವರ ಎದುರು ನಿಂತು ಸೋತ್ರೆ ನನ್ನ ರಾಜಕೀಯ ಇಲ್ಲಿಗೆ ಕ್ಲೋಜ್​ ಮಾಡೋಣ" ಎಂದು ಹೇಳಿದರು.

ಇದನ್ನೂ ಓದಿ:2024ರ ಲೋಕಸಭೆಯ ಹ್ಯಾಟ್ರಿಕ್ ಗೆಲುವಿಗೆ ಗ್ಯಾರಂಟಿ ಸಿಕ್ಕಿದೆ : ಪ್ರಧಾನಿ ಮೋದಿ ವಿಶ್ವಾಸ

ABOUT THE AUTHOR

...view details