ಮಂಡ್ಯ: ಮಾಜಿ ಸಚಿವ ಪುಟ್ಟರಾಜು ನನ್ನ ರಾಜಕೀಯ ಗುರು ಎಂದು ಸಚಿವ ನಾರಾಯಣಗೌಡ ಕೊಂಡಾಡಿದ್ದಾರೆ.
ಪಾಂಡವಪುರ ತಾಲೂಕಿನ 121 ಕೋಟಿ ವೆಚ್ಚದ ವಿವಿಧ ಇಲಾಖೆ ಅಭಿವೃದ್ಧಿ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಚಾಲನೆ ನೀಡಿದರು.
ಮಂಡ್ಯ: ಮಾಜಿ ಸಚಿವ ಪುಟ್ಟರಾಜು ನನ್ನ ರಾಜಕೀಯ ಗುರು ಎಂದು ಸಚಿವ ನಾರಾಯಣಗೌಡ ಕೊಂಡಾಡಿದ್ದಾರೆ.
ಪಾಂಡವಪುರ ತಾಲೂಕಿನ 121 ಕೋಟಿ ವೆಚ್ಚದ ವಿವಿಧ ಇಲಾಖೆ ಅಭಿವೃದ್ಧಿ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಚಾಲನೆ ನೀಡಿದರು.
ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 18 ಕಾಮಗಾರಿ ಸೇರಿ 84 ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಹಾಲಿ ಸಚಿವ ನಾರಾಯಣಗೌಡ ಹಾಗೂ ಮಾಜಿ ಸಚಿವ ಪುಟ್ಟರಾಜು ವೈರತ್ವ ಮರೆತು ಒಂದೇ ವೇದಿಕೆಯಲ್ಲಿ ಸಮಾಗಮವಾದರು. ಈ ವೇಳೆ ಮಾತನಾಡಿದ ಸಚಿವ ನಾರಾಯಣಗೌಡ, ಪುಟ್ಟರಾಜು ನನ್ನ ರಾಜಕೀಯ ಗುರು ಎಂದರು. ಪಕ್ಷಭೇದ ಮರೆತು ಇಬ್ಬರು ನಾಯಕರು ಕ್ಷೇತ್ರದ ಅಭಿವೃದ್ಧಿಯ ಮಂತ್ರ ಜಪಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಪುಟ್ಟರಾಜು, MLCಗಳಾದ ಅಪ್ಪಾಜಿಗೌಡ, ಕೆ.ಟಿ.ಶ್ರೀಕಂಠಯ್ಯ, ಡಿಸಿ ವೆಂಕಟೇಶ್, ಜಿಪಂ ಸಿಇಒ ಜುಲ್ಫೀಕರ್ ಉಲ್ಲಾ, ಎಸಿ ಶಿವಾನಂದ್ ಮೂರ್ತಿ ಸೇರಿ ಹಲವರು ಉಪಸ್ಥಿತರಿದ್ದರು.