ಮಂಡ್ಯ :ಮನೆಗೆ ಬೆಂಕಿಯಿಡುವ ಕೆಲಸ ಮಾಡಬೇಡಿ. ಮಳವಳ್ಳಿಯಲ್ಲಿ ಕಾಂಗ್ರೆಸ್ ಬಿದ್ದು ಹೋಗಿದ್ದನ್ನು ಬಹಳ ಕಷ್ಟಪಟ್ಟು ಎತ್ತಿ ನಿಲ್ಲಿಸಿದ್ದೀವಿ. ಇವತ್ತು ನಾನು ಸೋತಿರಬಹುದು. ಆದರೆ, ಕಾಂಗ್ರೆಸ್ ಸತ್ತಿಲ್ಲ ಎಂದು ಮಳವಳ್ಳಿಯಲ್ಲಿ ಮಾಜಿ ಸಚಿವ ನರೇಂದ್ರ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆದ್ದ ಸದಸ್ಯರಿಗೆ ಕಾಂಗ್ರೆಸ್ನಿಂದ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂದು ನಿಖಿಲ್ ಕುಮಾರಸ್ವಾಮಿ ಪರ 8 ಶಾಸಕರು ನೀವೇ ಇದ್ದಿರಿ. ಅದರಲ್ಲಿ ಮೂವರು ಮಂತ್ರಿಗಳಿದ್ದರು.