ಮಂಡ್ಯ:ಹೆಲ್ತ್ ಸರ್ವಿಸ್ನ್ನು ರಾಷ್ಟ್ರೀಕರಣ ಅಥವಾ ಖಾಸಗೀಕರಣ ಮಾಡಿ ಎಂದು ಮಾಜಿ ಸಚಿವ ಎನ್. ಮಹೇಶ್ ಸರ್ಕಾರಕ್ಕೆ ಒತ್ತಾಯಿಸಿದರು.
ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರಕ್ಕೆ ಇಚ್ಛಾಶಕ್ತಿ ಇದ್ರೆ ಹೆಲ್ತ್ ಸರ್ವಿಸ್ನ್ನು ರಾಷ್ಟ್ರೀಕರಣ ಮಾಡಿ. ಬಡವ, ಶ್ರೀಮಂತ ಎನ್ನದೆ ಎಲ್ಲರಿಗೂ ಉಚಿತವಾಗಿ ಸೇವೆ ನೀಡಿ ಎಂದು ಸಲಹೆ ನೀಡಿದರು. ರಾಜ್ಯದಲ್ಲಿ ಕೊರೊನಾ 2ನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ನಾವು ಗುಂಪು ಗುಂಪಾಗಿ ಸೇರುವುದು ತಪ್ಪು. ಕೊರೊನಾ ಚೈನ್ ಕಟ್ ಮಾಡಬೇಕು ಅಂದ್ರೆ ಹೆಚ್ಚು ಜನ ಸೇರುವುದನ್ನ ನಿಲ್ಲಿಸಬೇಕು ಎಂದು ಸಲಹೆ ನೀಡಿದರು.