ಮಂಡ್ಯ: ಕೊರೊನಾ ವಿಚಾರದಲ್ಲಿ ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದು, ದೂಷಿಸುವುದು ಸರಿಯಲ್ಲ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಬಗ್ಗೆ ವಾಸ್ತವ ಸ್ಥಿತಿಯನ್ನು ಮಾಧ್ಯಮಗಳು ಸರಿಯಾಗಿ ತಿಳಿಸುತ್ತಿವೆ. ಮಾಧ್ಯಮಗಳು ಇಲ್ಲವಾಗಿದ್ದರೆ ನಾವು ಎಲ್ಲಿರುತ್ತಿದ್ದೆವೋ ಎಂದು ಊಹಿಸಲೂ ಆಗುತ್ತಿರಲಿಲ್ಲ. ಯಾರೋ ಒಬ್ಬ, ಇಬ್ಬರು ಮಾತಾಡುತ್ತಾರೆ ಎಂದು ಲೆಕ್ಕಕ್ಕೆ ತೆಗೆದುಕೊಳ್ಳಬೇಡಿ. ಮಾಧ್ಯಮಗಳು ಜನಸಾಮಾನ್ಯರಿಗೆ ಅನೂಕೂಲವಾಗುವ ರೀತಿಯಲ್ಲಿ ಮಾಹಿತಿಗಳನ್ನು ನೀಡುತ್ತಿವೆ. ಕೊರೊನಾ ಹತೋಟಿಗೆ ತರಲು ಮಾಧ್ಯಮಗಳು ಸಹಕಾರಿಯಾಗಲಿವೆ. ಕೊರೊನಾ ನೋವನ್ನು ಅನುಭವಿಸಿದವರನ್ನು ಕೇಳಿದ್ರೆ ಗೊತ್ತಾಗುತ್ತೆ. ಉಡಾಫೆ ಮಾಡುವವರ ಮಾತಿಗೆ ಮಾಧ್ಯಮವರು ತಲೆಕೆಡಿಸಿಕೊಳ್ಳಬಾರದು ಎಂದು ಸಲಹೆ ನೀಡಿದರು.