ಕರ್ನಾಟಕ

karnataka

ETV Bharat / state

ನೆಲ ಬಾಡಿಗೆ ಮತ್ತು ಕಂದಾಯ ಪಾವತಿಸದ ಸಿ ಪಿ ಯೋಗೇಶ್ವರ್ ಪುತ್ರಿಗೆ ಕಾನೂನು ಕಂಟಕ - ಪುತ್ರಿ ನಿಶಾ ಯೋಗೇಶ್ವರ್

ಈ ಹಿಂದೆ ಹಲವಾರು ಬಾರಿ ಬಾಡಿಗೆ, ಕಂದಾಯ ಕಟ್ಟುವಂತೆ ನೋಟಿಸ್ ನೀಡಿದ್ರೂ ಉತ್ತರ ಬಾರದ ಕಾರಣ ಈ ಬಾರಿ ಆಡಳಿತ ಮಂಡಳಿಯ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಸಿಪಿವೈ ಪುತ್ರಿಗೆ ನೋಟಿಸ್ ನೀಡಿ ಕಾನೂನು ಹೋರಾಟ ನಡೆಸಲು ಸಂಘದ ನಿರ್ದೇಶಕರು ನಿರ್ಧರಿಸಿದ್ದಾರೆ..

ನಿಶಾ ಯೋಗೇಶ್ವರ್
ನಿಶಾ ಯೋಗೇಶ್ವರ್

By

Published : Oct 1, 2021, 4:37 PM IST

ಮಂಡ್ಯ :ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ ನೆಲ ಬಾಡಿಗೆ ಮತ್ತು ಕಂದಾಯ ಪಾವತಿಸದ ಕಾರಣಕ್ಕೆ ಅವರ ವಿರುದ್ಧ ಸ್ಥಳೀಯ ಸಹಕಾರ ಸಂಸ್ಥೆಯೊಂದು ಕಾನೂನು ಹೋರಾಟಕ್ಕೆ ಮುಂದಾಗಿದೆ.

ಸಿ.ಪಿ ಯೋಗೇಶ್ವರ್ ಪುತ್ರಿಗೆ ಕಾನೂನು ಕಂಟಕ

ಮದ್ದೂರು TAPCMSಗೆ ಸೇರಿದ ಗೋದಾಮನ್ನ 2017ರಲ್ಲಿ ಸಿಪಿವೈ ಪುತ್ರಿ ನಿಶಾ ಯೋಗೇಶ್ವರ್ ಒಡೆತನದ ಡೆಕ್ಕನ್ ಫೀಲ್ಡ್ ಆಗ್ರೋ ಇಂಡಸ್ಟ್ರೀಸ್ ಕಂಪನಿ ಬಾಡಿಗೆಗೆ ಪಡೆದಿದೆ.
ಆದ್ರೆ, 2017ರಿಂದ ಈವರೆಗೂ ಕಂಪನಿ ಒಪ್ಪಂದದಂತೆ ಬಾಡಿಯಾಗಲಿ, ಇನ್ನಿತರ ಯಾವುದೇ ಶುಲ್ಕವನ್ನಾಗಲಿ, ಕಂದಾಯವನ್ನು ಕೂಡ ಪಾವತಿಸಿಲ್ಲ.

ಈವರೆಗೂ ಕಂಪನಿ ಗೋದಾಮಿನ ಬಾಡಿಗೆ ₹42.47 ಲಕ್ಷ ಕೊಡಬೇಕಾಗಿದೆ. ಇದರ ಜೊತೆಗೆ ನೆಲದ ಬಾಡಿಗೆ 1.09 ಲಕ್ಷ ರೂ‌. ಹಾಗೂ ಪುರಸಭೆಗೆ 4.78 ಲಕ್ಷ ರೂ. ಕಂದಾಯ ಪಾವತಿಸಬೇಕಿದೆ.

ಈ ಹಿಂದೆ ಹಲವಾರು ಬಾರಿ ಬಾಡಿಗೆ, ಕಂದಾಯ ಕಟ್ಟುವಂತೆ ನೋಟಿಸ್ ನೀಡಿದ್ರೂ ಉತ್ತರ ಬಾರದ ಕಾರಣ ಈ ಬಾರಿ ಆಡಳಿತ ಮಂಡಳಿಯ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಸಿಪಿವೈ ಪುತ್ರಿಗೆ ನೋಟಿಸ್ ನೀಡಿ ಕಾನೂನು ಹೋರಾಟ ನಡೆಸಲು ಸಂಘದ ನಿರ್ದೇಶಕರು ನಿರ್ಧರಿಸಿದ್ದಾರೆ.

For All Latest Updates

ABOUT THE AUTHOR

...view details