ಮಂಡ್ಯ :ಕೇಂದ್ರ ಸರ್ಕಾರದ ಬಜೆಟ್ ರಾಷ್ಟ್ರದ ಜನರ ಪರ ಇಲ್ಲ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಟೀಕೆ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ಡೌನ್ ನಂತರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮಾಡಿದ್ದಾರೆ. ಜನರ ಸಮಸ್ಯೆಗಳನ್ನ ಗಮನದಲ್ಲಿಟ್ಟಿಕೊಂಡು ಒಂದು ಒಳ್ಳೆಯ ಬಜೆಟ್ ಕೊಡ್ತಾರೆ ಅನ್ನೋ ನಿರೀಕ್ಷೆ ಇತ್ತು. ನಾವು ಯಾವುದೇ ತರ ಜನಪರ ಬಜೆಟ್ ನೋಡಿಲ್ಲ ಎಂದು ವ್ಯಂಗ್ಯವಾಡಿದರು.
ಕೇಂದ್ರ ಸರ್ಕಾರ ಪ್ರತಿಯೊಬ್ಬರ ಮೇಲೆ ಹೊರೆ ಹೇರುವ ಕೆಲಸ ಮಾಡಿದೆ. ಜನರಿಗೆ ಇನ್ನು ಹೆಚ್ಚು ಸಮಸ್ಯೆಗಳು ಆಗುವ ರೀತಿ ಮಾಡಿದ್ದಾರೆಯೇ ವಿನಃ ಯಾವುದೇ ತರಹದ ಅನುಕೂಲಕರ ವಾತಾವರಣ ಮಾಡಿಲ್ಲ ಎಂದು ಗುಡುಗಿದರು.
ಕೇಂದ್ರದ ಬಜೆಟ್‌ನಿಂದ ಸಾಮಾನ್ಯರಿಗೇನೂ ಧಕ್ಕಲ್ಲ.. ಮಾಜಿ ಸಚಿವ ಚಲುವರಾಯಸ್ವಾಮಿ ರೈತರ ಖಾತೆಗೆ ವರ್ಷಕ್ಕೆ ₹6 ಸಾವಿರ ಹಾಕ್ತೇವೆ ಅಂತಾ ಹೇಳಿದ್ರು, ಈಗ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮಾಡಿದ್ದಾರೆ. ಪ್ರತಿಯೊಬ್ಬರ ಕುಟುಂಬದಲ್ಲಿ ವಾಹನಗಳಿವೆ. ಒಂದು ವರ್ಷಕ್ಕೆ ಒಂದು ಕುಟುಂಬಕ್ಕೆ ₹2 ಲಕ್ಷ ಹೊರೆ ಬೀಳುತ್ತೆ.
ಹೀಗಾಗಿ, ಜನರಿಂದ ₹2 ಲಕ್ಷ ಪಡೆದು ₹6 ಸಾವಿರ ರೈತರಿಗೆ ಹಾಕುವುದು ಎಷ್ಟು ಸರಿ? ಎಂದು ಪ್ರಶ್ನೆ ಮಾಡಿದ ಅವರು, ಬಹುಶಃ ನಮ್ಮ ಜನರಿಗೆ ಇದು ಅರ್ಥವಾಗಿರುತ್ತದೆ ಎಂದರು.
ಓದಿ:'ಹುಟ್ಟುವ ಮಗುವಿಗೂ ಋಣಭಾರ ಹೊರಿಸಿದ ಬೂಸಾ ಬಜೆಟ್.. ದುಡಿಯೋ ರೈತನಿಗೆ ಹಗ್ಗವೇ ಗತಿ'
ನರೇಂದ್ರ ಮೋದಿ ತುಂಬಾ ಬುದ್ದಿವಂತಿಕೆಯಿಂದ ಜನರ ಮೇಲೆ ಎಲ್ಲ ತರಹದ ಹೊರೆ ಹೊರಿಸುವ ಕೆಲಸವನ್ನ ಬಹಳ ನೈಪುಣ್ಯತೆಯಿಂದ ಮಾಡ್ತಿದ್ದಾರೆ. ಕೇಂದ್ರದ ಬಜೆಟ್ ಈ ರಾಷ್ಟ್ರದ ಜನರ ವಿರೋಧಿ ಬಜೆಟ್ ಆಗಿದೆ ಎಂದು ಟೀಕಿಸಿದರು.