ಮಂಡ್ಯ :ವಿಧಾನ ಪರಿಷತ್ ಮಾಜಿ ಸದಸ್ಯ ಇಂಡವಾಳು ಹೆಚ್. ಹೊನ್ನಪ್ಪ ವಿಧಿವಶರಾಗಿದ್ದಾರೆ. ಇಂಡವಾಳು ಹೊನ್ನಯ್ಯನವರ ಪುತ್ರ ಹೊನ್ನಪ್ಪ ಅವರು ಸೂಕ್ಷ್ಮ ಮನಸ್ಸಿನ ವ್ಯಕ್ತಿತ್ವ ಹೊಂದಿ ಜನಪ್ರಿಯ ನಾಯಕರಾಗಿದ್ದರು. ಪಿಇಟಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೂಡ ಆಗಿ ಸೇವೆ ಸಲ್ಲಿಸಿದ್ದರು. ಎಸ್. ಡಿ ಜಯರಾಂ, ಎಂ ಎಸ್ ಆತ್ಮಾನಂದ ಮದ್ದೂರಿನ ಎಂ ಎಸ್ ಸಿದ್ದರಾಜು ಸೇರಿದಂತೆ ಅಪಾರ ಒಡನಾಡಿಗಳನ್ನು ಹೊಂದಿದ್ದ ಇವರು ಇಂದು ಇಹಲೋಕ ತ್ಯಜಿಸಿದ್ದಾರೆ.
ಮಂಡ್ಯ ಜಿಲ್ಲಾ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರಾಗಿದ್ದ ಇವರು ಮೈಶುಗರ್ ಅಧ್ಯಕ್ಷರೂ ಆಗಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇವರು ಇಂದು ಬೆಳಗ್ಗೆ ಮನೆಯಲ್ಲಿ ವಿಧಿವಶರಾಗಿದ್ದಾರೆ. ಇವರ ಅಂತ್ಯಕ್ರಿಯೆಯನ್ನು ಸಂಜೆ 4 ಗಂಟೆಗೆ ಇಂಡವಾಳು ಗ್ರಾಮದಲ್ಲಿ ನಡೆಸಲಾಗಿದೆ. ಹೆಚ್. ಹೊನ್ನಪ್ಪ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಮೃತರ ಅಂತಿಮ ದರ್ಶನ ಪಡೆದ ಸಚಿವ ಅಶ್ವತ್ಥ್ ನಾರಾಯಣ್ :ಸಚಿವ ಅಶ್ವತ್ಥ್ ನಾರಾಯಣ್ ಅವರು ಮಾಜಿ ವಿಧಾನ ಪರಿಷತ್ ಸದಸ್ಯ ಹೆಚ್. ಹೊನ್ನಪ್ಪ ಅವರ ಮೃತ ದೇಹದ ಅಂತಿಮ ದರ್ಶನ ಪಡೆದ್ರು. ಹುಟ್ಟೂರು ಮಂಡ್ಯ ತಾಲ್ಲೂಕಿನ ಇಂಡುವಾಳು ಗ್ರಾಮದಲ್ಲಿ ವಿಧಿವಿಧಾನಗಳ ಮೂಲಕ ಅಂತ್ಯ ಸಂಸ್ಕಾರ ನಡೆಸಲಾಯ್ತು. ಮಂಡ್ಯದ ಇಂಡುವಾಳು ಗ್ರಾಮದವರಾದ ಹೆಚ್. ಹೊನ್ನಪ್ಪ ಮಂಡ್ಯದ ಮೈಶುಗರ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ಅಲ್ಲದೇ, ಸಹಕಾರ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದವರು.
ಮಂಡ್ಯದ ಪ್ರತಿಷ್ಠಿತ ಪಿಇಎಸ್ ವಿದ್ಯಾಸಂಸ್ಥೆಯ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. 1998 ರಲ್ಲಿ ಜನತಾ ಪಕ್ಷದಿಂದ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿ ಅವರು ಗೆಲುವು ಸಾಧಿಸಿದ್ದರು. 1998 ರಿಂದ 2004 ರವರೆಗೆ ಎಂಎಲ್ಸಿ ಆಗಿದ್ದ ಅವರು ನಂತರ ಜೆಡಿಎಸ್ ನಿಂದ ದೂರವಾಗಿ ಬಿಜೆಪಿ ಪಕ್ಷವನ್ನ ಸೇರಿದ್ರು.