ಮಂಡ್ಯ: ಮಂಡ್ಯ ಮೈತ್ರಿ ತಿಪ್ಪರಲಾಗ ಹಾಕಿದರೂ ಜೊತೆ ಗೂಡಲ್ಲ ಎಂಬುದು ಸಾಬೀತಾಗಿದೆ. ಯಾಕೆ ಅಂತೀರಾ ನೀವೇ ನೋಡಿ.
ಅಪ್ಪ ಹಂಗೇ ಮಗ ಹಿಂಗೇ : ತಂದೆ ಜಿ.ಮಾದೇಗೌಡ ಮೈತ್ರಿ.. ಕೈ ಮಾಜಿ ಶಾಸಕ ಮಧು ಸುಮಲತಾಗೆ ಬೆಂಬಲ ಖಾತ್ರಿ.. - ಮಾಜಿ ಸಂಸದ ಜಿ. ಮಾದೇಗೌಡ
ಮಾಜಿ ಸಂಸದ ಜಿ. ಮಾದೇಗೌಡ ಮೈತ್ರಿ ಅಭ್ಯರ್ಥಿ ಪರ ನಿಂತರೆ, ಅತ್ತ ಅವರ ಪುತ್ರ, ಮಾಜಿ ಶಾಸಕ ಮಧು ಮಾದೇಗೌಡ ನಟ ಯಶ್‌ಗೆ ಪ್ರಚಾರದ ಮಧ್ಯೆ ತಮ್ಮ ಗೆಸ್ಟ್ಹೌಸ್ನಲ್ಲಿ ಆತಿಥ್ಯ ನೀಡಿದ್ದಾರೆ.

ಮಧು ಮಾದೇಗೌಡ
ಮಾಜಿ ಸಂಸದ ಜಿ. ಮಾದೇಗೌಡ ಮೈತ್ರಿ ಅಭ್ಯರ್ಥಿ ಪರ ನಿಂತರೆ, ಅತ್ತ ಅವರ ಪುತ್ರ ಮಾಜಿ ಶಾಸಕ ಮಧು ಮಾದೇಗೌಡ ನಟ ಯಶ್‌ಗೆ ಪ್ರಚಾರದ ಮಧ್ಯೆ ತಮ್ಮ ಗೆಸ್ಟ್ಹೌಸ್ನಲ್ಲಿ ಆತಿಥ್ಯ ನೀಡಿದ್ದಾರೆ. ಆ ಮೂಲಕ ನಾವು ಮೈತ್ರಿಯಿಂದ ದೂರ ಎಂಬುದನ್ನು ತೋರಿಸಿದ್ದಾರೆ.
ಮಾಜಿ ಶಾಸಕ ರಮೇಶ್ ಗೌಡ ಬೆಂಬಲಿಗರು
ಇತ್ತ ಮಾಜಿ ಶಾಸಕ ರಮೇಶ್ ಗೌಡ ಬೆಂಬಲಿಗರು ಶಾಸಕರ ಜೊತೆಗೂಡಿ ಬೆಂಬಲಿಗರ ಸಭೆ ಮಾಡಿ ಸುಮಲತಾ ಕಡೆ ಪ್ರಚಾರ ಮಾಡೋದಾಗಿ ಬಹಿರಂಗವಾಗಿ ಘೋಷಣೆ ಮಾಡಿದರು. ಮಾಜಿ ಶಾಸಕರನ್ನು ಮುಂದೆ ಕೂರಿಸಿಕೊಂಡು ಒತ್ತಾಯವಾಗಿ ಬೆಂಬಲ ಘೋಷಣೆ ಮಾಡಲೇಬೇಕು ಎಂದು ಪಟ್ಟು ಹಿಡಿದಿದ್ದರು.