ಮಂಡ್ಯ:ಬಿ.ಎಸ್.ಯಡಿಯೂರಪ್ಪನವರ ಅತ್ತಿಗೆ ಶಾರದಮ್ಮ (90) ಇಂದು ಮುಂಜಾನೆ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರ ಅತ್ತಿಗೆ ನಿಧನ - ವೀರಶೈವ ಸಮುದಾಯ
ಮಾಜಿ ಸಿಎಂ ಯಡಿಯೂರಪ್ಪ ಅವರ ಅತ್ತಿಗೆ ವಿಧಿವಶರಾಗಿದ್ದಾರೆ. ಇಂದು ಬೂಕನಕೆರೆಯಲ್ಲಿ ಮೃತದೇಹದ ಅಂತ್ಯಕ್ರಿಯೆ ನೆರವೇರಲಿದೆ.
![ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರ ಅತ್ತಿಗೆ ನಿಧನ former-cm-yeddyurappas-sister-in-law-passes-away](https://etvbharatimages.akamaized.net/etvbharat/prod-images/768-512-13252815-thumbnail-3x2-mnd.jpg)
ಮಾಜಿ ಸಿಎಂ ಯಡಿಯೂರಪ್ಪ ಅತ್ತಿಗೆ ನಿಧನ
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಗ್ರಾಮದಲ್ಲಿರುವ ಸ್ವಗೃಹದಲ್ಲಿ ವಯೋಸಹಜ ಕಾಯಿಲೆಯಿಂದ ಅವರು ಬಳಲುತ್ತಿದ್ದರು.
ಇಂದು ಮಧ್ಯಾಹ್ನದ ವೇಳೆಗೆ ವೀರಶೈವ ಸಮುದಾಯದ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅತ್ತಿಗೆಯ ಅಂತ್ಯಸಂಸ್ಕಾರದಲ್ಲಿ ಬಿಎಸ್ವೈ ಸೇರಿ ಕುಟುಂಬಸ್ಥರು ಭಾಗಿಯಾಗಲಿದ್ದಾರೆ.