ಮಂಡ್ಯ :ಕಾಡಾನೆಗಳ ಹಿಂಡು ರೈತರ ಬೆಳೆಗಳ ಮೇಲೆ ದಾಳಿ ಮಾಡಿರುವ ಘಟನೆ ಮದ್ದೂರಿನ ಶಿಂಷಾ ನದಿ ದಂಡೆಯ ಮೇಲೆ ನಡೆದಿದೆ.
ಶಿಂಷೆ ಒಡಲಿಗೆ ದಾಳಿಯಿಟ್ಟ ಆನೆಗಳ ಹಿಂಡು.. - ಆನೆ ಹಾವಳಿ
ಶಿಂಷಾ ನದಿಯಲ್ಲಿ ಬೆಳ್ಳಂಬೆಳಗ್ಗೆ ಕಾಡಾನೆಗಳ ಚಿನ್ನಾಟ ಶುರು ಮಾಡಿವೆ. ಸ್ಥಳೀಯ ರೈತರ ಜಮೀನುಗಳಿಗೂ ಲಗ್ಗೆ ಇಟ್ಟಿವೆ.
ಆನೆ
ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿರುವ ಐದು ಕಾಡಾನೆಗಳು ಮದ್ದೂರು ಪಟ್ಟಣದ ಶಿಂಷಾ ನದಿಯ ತ'ದಲ್ಲಿ ಬೀಡು ಬಿಟ್ಟಿವೆ. ಶಿಂಷಾ ನದಿಯಲ್ಲಿ ಬೆಳ್ಳಂಬೆಳಗ್ಗೆ ಕಾಡಾನೆಗಳ ಚಿನ್ನಾಟ ಶುರು ಮಾಡಿವೆ. ಸ್ಥಳೀಯ ರೈತರ ಜಮೀನುಗಳಿಗೂ ಲಗ್ಗೆ ಇಟ್ಟಿವೆ.
ಮುತ್ತತ್ತಿ ಅರಣ್ಯದಿಂದ ಬಂದಿರೋ ಐದು ಕಾಡಾನೆಗಳನ್ನು ಓಡಿಸುವಂತೆ ಅರಣ್ಯ ಇಲಾಖೆಗೆ ರೈತರ ಮನವಿ ಮಾಡಿದ್ದಾರೆ.