ಕರ್ನಾಟಕ

karnataka

ETV Bharat / state

ಕೆಆರ್​​ಎಸ್​​ ಜಲಾಶಯದ ಹಿನ್ನೀರಿನಲ್ಲಿ ಸಿಕ್ತು, 36 ಕೆಜಿ ತೂಕದ ಕಾಟ್ಲಾ ಮೀನು

ಲಾಕ್‌ಡೌನ್‌ ಹಿನ್ನೆಲೆ, ಈ ಮೀನನ್ನು ಪೂರ್ತಿಯಾಗಿ ಮಾರಾಟ ಮಾಡಿಲ್ಲ. ಬದಲಾಗಿ 170 ರೂ. ನಂತೆ ಕತ್ತರಿಸಿ ಮಾರಾಟ ಮಾಡಲಾಗಿದೆ. 6 ಸಾವಿರ ರೂಪಾಯಿಗೆ ಮಾರಾಟ ಮಾಡಲಾಗಿದೆ..

38 kg katla fish
36 ಕೆಜಿ ತೂಕದ ಕಾಟ್ಲಾ ಮೀನು

By

Published : Jun 1, 2021, 4:28 PM IST

ಮಂಡ್ಯ :ಕೊರೊನಾ ಲಾಕ್‌ಡೌನ್‌ ನಡುವೆಯೂ ಕೆಆರ್‌ಎಸ್ ಹಿನ್ನೀರಿನಲ್ಲಿ ಮೀನುಗಾರ ನಂಜುಂಡಣ್ಣ ಹಾಕಿದ್ದ ಬಲೆಗೆ ಬರೋಬ್ಬರಿ 36 ಕೆಜಿ ತೂಕದ ಕಾಟ್ಲಾ ಮೀನು ಬಿದ್ದಿದೆ.

36 ಕೆಜಿ ತೂಕದ ಕಾಟ್ಲಾ ಮೀನು

ಓದಿ: ಜಲಾಶಯದ ಹಿನ್ನೀರಿನಲ್ಲಿ ಸಿಕ್ಕಿತು 38 ಕೆಜಿ ಗಾತ್ರದ ಕಾಟ್ಲಾ ಮೀನು

ಕೆ‌ಆರ್‌ಎಸ್ ಹಿನ್ನೀರಿನಲ್ಲಿ ಚಿಕ್ಕಂದಿನಿಂದಲೂ ಮೀನು ಹಿಡಿಯುವುದನ್ನೇ ರೂಢಿಸಿಕೊಂಡಿರುವ ನಂಜುಂಡಣ್ಣ ಹಾಕಿದ್ದ ಬಲೆಗೆ, ಅಪರೂಪಕ್ಕೆ ರಕ್ಕಸ ಮೀನು ಬಿದ್ದಿರುವುದು ಆಶ್ಚರ್ಯವಾಗಿದೆ. ಕೆಆರ್‌ಎಸ್‌ನಲ್ಲಿ ಇನ್ನೂ ದೊಡ್ಡದಾದ ಮೀನುಗಳಿವೆ. ಆದರೆ, ನಾವು ಬಳಸುವ ಬಲೆಗೆ ಅಂತಹ ಮೀನುಗಳು ಬೀಳುವುದಿಲ್ಲ ಎಂದು ನಂಜುಂಡಣ್ಣ ಮಾಹಿತಿ ನೀಡಿದ್ದಾರೆ.

ನಾವು 20 ಸಾವಿರ ರೂ‌. ಬೆಲೆಯ ಬಲೆ ಬಳಸುತ್ತೇವೆ. ಅಂತಹ ಮೀನು ಹಿಡಿಯಲು 50 ಸಾವಿರ ರೂ. ಬೆಲೆಯ ತಮಿಳುನಾಡಿನ ತಂಗುಸ್‌ ಎನ್ನುವ ಬಲೆ ಬೇಕು ಎಂದರು.

ಸೂಪರ್ ಬೆಲೆ :ಲಾಕ್‌ಡೌನ್‌ ಹಿನ್ನೆಲೆ, ಈ ಮೀನನ್ನು ಪೂರ್ತಿಯಾಗಿ ಮಾರಾಟ ಮಾಡಿಲ್ಲ. ಬದಲಾಗಿ 170 ರೂ. ನಂತೆ ಕತ್ತರಿಸಿ ಮಾರಾಟ ಮಾಡಲಾಗಿದೆ. 6 ಸಾವಿರ ರೂಪಾಯಿಗೆ ಮಾರಾಟ ಮಾಡಲಾಗಿದೆ ಎಂದು ತಿಳಿಸಿದರು.

ABOUT THE AUTHOR

...view details