ಕರ್ನಾಟಕ

karnataka

ETV Bharat / state

ಬಂಗಾರದ ಬೆಟ್ಟಕ್ಕೆ ಬಿದ್ದ ಬೆಂಕಿ... ಅಕ್ರಮ ಕಲ್ಲು ಗಣಿಗಾರಿಕೆಗಾಗಿ ಕಿಚ್ಚು ಹಚ್ಚಿದ್ರಾ? - ಬಂಗಾರದ ಬೆಟ್ಟಕ್ಕೆ ಬೆಂಕಿ

ಶ್ರೀರಂಗಪಟ್ಟಣ ತಾಲೂಕಿನ ಬಂಗಾರದ ಬೆಟ್ಟಕ್ಕೆ ಬೆಂಕಿ ಬಿದ್ದು, ಇತ್ತೀಚೆಗಷ್ಟೇ ಹಾಕಲಾಗಿದ್ದ ಸಸ್ಯಗಳು ಸುಟ್ಟು ಕರಕಲಾಗಿವೆ. ಅಕ್ರಮ ಕಲ್ಲು ಗಣಿ ಮಾಲೀಕರು ಬೆಂಕಿ ಹಚ್ಚಿರುವ ಆರೋಪ ಕೇಳಿ ಬಂದಿದೆ.

Fire to the golden hill
ಶ್ರೀರಂಗಪಟ್ಟಣ ತಾಲ್ಲೂಕಿನ ಬಂಗಾರದ ಬೆಟ್ಟ ಬೆಂಕಿ

By

Published : Jan 30, 2020, 8:49 AM IST

ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಬಂಗಾರದ ಬೆಟ್ಟಕ್ಕೆ ಬೆಂಕಿ ಬಿದ್ದು, ಇತ್ತೀಚೆಗಷ್ಟೇ ಹಾಕಲಾಗಿದ್ದ ಸಸ್ಯಗಳು ಸುಟ್ಟು ಕರಕಲಾಗಿವೆ.

ಶ್ರೀರಂಗಪಟ್ಟಣ ತಾಲೂಕಿನ ಬಂಗಾರದ ಬೆಟ್ಟ ಬೆಂಕಿ

ಮೂರು ದಿನಗಳಿಂದ ಬೆಂಕಿ ಬಿದ್ದಿದೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಬೆಂಕಿ ನಿಯಂತ್ರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ. ಅಪರೂಪದ ಸಸ್ಯ ಸಂಕುಲ ಈ ಬೆಟ್ಟದಲ್ಲಿದೆ. ಅಲ್ಲದೆ ವರ್ಷದ ಹಿಂದೆ ಇಲ್ಲಿ ನೆಡು ತೋಪು ಮಾಡಲಾಗಿತ್ತು. ಅಕ್ರಮ ಕಲ್ಲು ಗಣಿ ಮಾಲೀಕರು ಬೆಂಕಿ ಹಚ್ಚಿರುವ ಆರೋಪ ಕೇಳಿ ಬಂದಿದೆ. ಗಿಡವಿಲ್ಲದೇ ಇದ್ದರೆ ಗಣಿಗಾರಿಕೆ ಮಾಡಲು ಅವಕಾಶ ಸಿಗುತ್ತದೆ ಎಂಬ ಕಾರಣಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಸಂಬಂಧ ಅರಣ್ಯ ಸಂರಕ್ಷಣೆಗೆ ಕ್ರಮ ಕೈಗೊಂಡು, ಬೆಂಕಿ ಹಚ್ಚಿದವರನ್ನು ಪತ್ತೆ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ABOUT THE AUTHOR

...view details