ಮಂಡ್ಯ: ಡೀಸೆಲ್ ಕೊಂಡೊಯ್ಯುತ್ತಿದ್ದ ಟ್ಯಾಂಕರ್‌ಗೆ ಆಕಸ್ಮಿಕ ಬೆಂಕಿ ತಗುಲಿ ಧಗ ಧಗನೆ ಹೊತ್ತಿ ಉರಿದ ಘಟನೆ ಕೆ.ಆರ್.ಪೇಟೆ ತಾಲೂಕಿನ ಚಿಕ್ಕೋಸಹಳ್ಳಿ ಗ್ರಾಮದ ಹೊರವಲಯದ ಬಳಿ ನಡೆದಿದೆ.
ಶ್ರವಣಬೆಳಗೊಳ ರಸ್ತೆಯಲ್ಲಿನ ಭಾರತೀಪುರ ಬಳಿಯ ಉಪ್ಪಾರ್ ಕ್ಯಾಂಪ್‌ನಲ್ಲಿ ಕಾಮಗಾರಿ ನಡೆಯುತ್ತಿದ್ದು, ವಾಹನಗಳಿಗೆ ತುಂಬಿಸಲು ಡೀಸೆಲ್ ತೆಗೆದುಕೊಂಡು ಹೋಗಲಾಗುತ್ತಿತ್ತು. ಈ ಸಂದರ್ಭದಲ್ಲಿ ಲಾರಿಯ ಕ್ಯಾಬಿನ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಾಗ ಲಾರಿಯ ಚಾಲಕ ಸಂಗಣ್ಣ ಸಮಯ ಪ್ರಜ್ಞೆಯಿಂದ ಕೆ.ಆರ್.ಪೇಟೆಯ ಅಗ್ನಿಶಾಮಕ ಠಾಣೆಗೆ ಸುದ್ದಿ ಮುಟ್ಟಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು.