ಮಂಡ್ಯ:ನಗರದ ವಿವೇಕಾನಂದ ರಸ್ತೆಯಲ್ಲಿರುವ ಆಕ್ಸಿಸ್ ಬ್ಯಾಂಕ್ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಮಂಡ್ಯ ಆಕ್ಸಿಸ್ ಬ್ಯಾಂಕ್ ಕಟ್ಟಡದಲ್ಲಿ ಭಾರಿ ಅಗ್ನಿ ಅವಘಡ - mandya news
ಮಂಡ್ಯದ ವಿವೇಕಾನಂದ ರಸ್ತೆಯಲ್ಲಿರುವ ಆಕ್ಸಿಸ್ ಬ್ಯಾಂಕ್ನ ಕೆಳಮಹಡಿಯಲ್ಲಿದ್ದ ಜನರೇಟರ್ಗೆ ಬೆಂಕಿ ಹೊತ್ತಿಕೊಂಡು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಆಕ್ಸಿಸ್ ಬ್ಯಾಂಕ್ ಕಟ್ಟಡದಲ್ಲಿ ಅಗ್ನಿ ಅವಘಡ...ತಪ್ಪಿದ ಅನಾಹುತ..!
ಆಕ್ಸಿಸ್ ಬ್ಯಾಂಕ್ನ ಕೆಳಮಹಡಿಯಲ್ಲಿದ್ದ ಜನರೇಟರ್ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ, ಕಟ್ಟಡದ ತುಂಬ ಹೊಗೆ ಆವರಿಸಿಕೊಂಡಿತ್ತು. ಇದರಿಂದ ಬ್ಯಾಂಕ್ ನೌಕರರು, ಗ್ರಾಹಕರು ಆತಂಕದಿಂದ ಹೊರ ಓಡಿಬಂದಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ.
ಕೂಡಲೇ ಸ್ಥಳಾಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.