ಮಂಡ್ಯ: ಕಿಡಿಗೇಡಿಗಳು ಒಣ ಹುಲ್ಲಿನ ಬಣವೆಗೆ ಬೆಂಕಿ ಹಾಕಿರುವ ಘಟನೆ ಮದ್ದೂರು ತಾಲೂಕಿನ ಆಲೂರು ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ.
ಸತೀಶ್ ಎಂಬುವರಿಗೆ ಸೇರಿದ ಒಣ ಹುಲ್ಲಿನ ಬಣವೆ ಇದಾಗಿದ್ದು, ಕಿಡಿಗೇಡಿಗಳು ಮಾಡಿದ ಘಟನೆಯಲ್ಲಿ ರೈತನ 40 ಸಾವಿರ ರೂ. ಮೌಲ್ಯದ ಒಣಹುಲ್ಲು ಭಸ್ಮವಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.