ಕರ್ನಾಟಕ

karnataka

ETV Bharat / state

ವಿಶೇಷಚೇತನರಿಗೆ ಕಿಟ್​ ವಿತರಿಸುವಾಗ ಕೋವಿಡ್ ನಿಯಮ ಉಲ್ಲಂಘನೆ.. ಮಂಡ್ಯದಲ್ಲಿ ಎಫ್​​ಐಆರ್ ದಾಖಲು - B Revanna

ಫುಡ್​​​ ಕಿಟ್​​ ವಿತರಣೆ ವೇಳೆ ನಿಯಮ ಉಲ್ಲಂಘಿಸಿದ್ದಕ್ಕಾಗಿ, ಅನುಮತಿ ನೀಡಿದ್ದ ಅಧಿಕಾರಿಗಳೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕಾಂಗ್ರೆಸ್​ ನಾಯಕ ಬಿ.ರೇವಣ್ಣ ಸಮ್ಮುಖದಲ್ಲೇ ಕಿಟ್​ ವಿತರಣೆ ಕಾರ್ಯ ನಡೆದಿತ್ತು.

fir-registered-for-violation-of-covid-norms-during-kit-distribution
ವಿಶೇಷಚೇತನರಿಗೆ ಕಿಟ್​ ವಿತರಣೆ ವೇಳೆ ಕೋವಿಡ್ ನಿಯಮ ಉಲ್ಲಂಘನೆ

By

Published : Jun 20, 2021, 7:48 PM IST

ಮಂಡ್ಯ: ವಿಶೇಷಚೇತನರಿಗೆ ಫುಡ್​​​​ಕಿಟ್​​ ವಿತರಿಸುವ ಭರದಲ್ಲಿ ಕೋವಿಡ್ ನಿಯಮಾವಳಿ ಗಾಳಿಗೆ ತೂರಿರುವ ಘಟನೆ ನಡೆದಿದೆ. ಕಾಂಗ್ರೆಸ್ ಮುಖಂಡ ಬಿ.ರೇವಣ್ಣ ನೇತೃತ್ವದಲ್ಲಿ ನಡೆದ ಫುಡ್​​​ಕಿಟ್ ವಿತರಣೆ ವೇಳೆ ಜನರು ಮುಗಿಬಿದ್ದು, ಕೋವಿಡ್ ನಿಯಮಗಳನ್ನು ಮರೆತಿರುವುದು ಕಂಡುಬಂದಿದೆ.

ವಿಶೇಷಚೇತನರಿಗೆ ಫುಡ್‍ಕಿಟ್ ನೀಡಲು ಪಾಂಡವಪುರ ಪುರಸಭೆಯ ಅಧಿಕಾರಿಗಳ ಬಳಿ ಮೌಕಿಕವಾಗಿ ಅನುಮತಿ ಪಡೆದ ಬಳಿಕ ಪುರಸಭೆ ಎದುರು ಕಿಟ್ ವಿತರಣೆ ಮಾಡಲಾಗಿತ್ತು. ಆದರೆ ರಾತ್ರಿ 8 ಗಂಟೆ ಸುಮಾರಿಗೆ ಪುರಸಭೆ ಅಧಿಕಾರಿಗಳೇ ಪೊಲೀಸರಿಗೆ ದೂರು ನೀಡಿದ್ದಾರೆ. ಫುಡ್​​ಕಿಟ್​​ ವಿತರಣೆ ವೇಳೆ ಕೋವಿಡ್​​​ ನಿಯಮ ಉಲ್ಲಂಘನೆಯಾಗಿದೆ ಎಂದು ಪಾಂಡವಪುರ ಪೊಲೀಸ್​​ ಠಾಣೆಯಲ್ಲಿ ದೂರು ನೀಡಲಾಗಿದ್ದು, ಎಫ್​ಐಆರ್ ಸಹ ದಾಖಲಾಗಿದೆ.

ಎಫ್​​ಐಆರ್ ಪ್ರತಿ

ಇದನ್ನೂ ಓದಿ:ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಬಸ್ ಸಂಚಾರಕ್ಕೆ ಸಕಲ ಸಿದ್ಧತೆ.. NWKSRTC ಎಂಡಿ ಕೃಷ್ಣ ವಾಜಪೇಯಿ..

ABOUT THE AUTHOR

...view details