ಕರ್ನಾಟಕ

karnataka

ETV Bharat / state

ಬಿಸಿಯೂಟದ ತೊಗರಿ ಬೇಳೆ ಮಾರಾಟ; ವಿಡಿಯೋ ವೈರಲ್​ ಬಳಿಕ ಮುಖ್ಯ ಶಿಕ್ಷಕ ಅಮಾನತು - mid day meal

ಮಂಡ್ಯ ಜಿಲ್ಲೆಯ ಸರ್ಕಾರಿ ಶಾಲೆಯ ಮಕ್ಕಳಿಗೆ ಬಿಸಿಯೂಟಕ್ಕಾಗಿ ಸರ್ಕಾರದಿಂದ ನೀಡಲಾದ ಉಚಿತ ತೊಗರಿ ಬೇಳೆಯನ್ನು ಮುಖ್ಯ ಶಿಕ್ಷಕನೇ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.

FIR filed against govt teacher for selling toor daal distributed for mid day meal
ಅಮಾನತುಗೊಳಗಾದ ಮುಖ್ಯ ಶಿಕ್ಷಕ

By

Published : Jul 1, 2022, 7:20 PM IST

ಮಂಡ್ಯ:ಬಿಸಿಯೂಟಕ್ಕೆಂದು ಸರ್ಕಾರದಿಂದ ಬರುವ ತೊಗರಿಬೇಳೆಯನ್ನು ಮಾರಾಟ ಮಾಡಲು ಹೋಗಿ ಇಲ್ಲಿಯ ಶಾಲಾ ಮುಖ್ಯ ಶಿಕ್ಷಕನೊಬ್ಬ ಇದೀಗ ಅಮಾನತು ಶಿಕ್ಷೆಗೊಳಗಾಗಿದ್ದಾನೆ. ಮಳವಳ್ಳಿ ತಾಲೂಕಿನ ಮಾರಗೌಡನಹಳ್ಳಿ ಪ್ರೌಢಶಾಲೆಯ ಕಾಳರಾಜೇಗೌಡ ಅಮಾನತುಗೊಂಡ ಮುಖ್ಯ ಶಿಕ್ಷಕ.


ಆರೋಪಿ ಕಾಳರಾಜೇಗೌಡ, ಬಿಸಿಯೂಟದ ತೊಗರಿಬೇಳೆಯನ್ನು ಮಾರಾಟ ಮಾಡುವ ವಿಡಿಯೋ ವೈರಲ್ ಆಗಿದ್ದು ಈ ಬಗ್ಗೆ ಹಲಗೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಬಳಿಕ ಕಠಿಣ ಕ್ರಮ ಕೈಗೊಂಡು ಡಿಡಿಪಿಐ ಎಸ್.ಟಿ.ಜವರೇಗೌಡ ಆದೇಶ ಹೊರಡಿಸಿದ್ದಾರೆ.

ದೂರು ಪ್ರತಿ

ABOUT THE AUTHOR

...view details