ಕರ್ನಾಟಕ

karnataka

ETV Bharat / state

ಮಂಡ್ಯ: ನಟಿ ರಚಿತಾ ರಾಮ್ ವಿರುದ್ಧ ದೂರು ದಾಖಲು - ನಟಿ ರಚಿತಾ ರಾಮ್​ ಕ್ರಾಂತಿ ಉತ್ಸವ ಮಾಡಿ ಎಂದು ಹೇಳಿದ್ದರು

ಕ್ರಾಂತಿ ಸಿನಿಮಾ ಕಾರ್ಯಕ್ರಮದಲ್ಲಿ ನಟಿ ರಚಿತಾ ರಾಮ್​ ಕ್ರಾಂತಿ ಉತ್ಸವ ಮಾಡಿ ಎಂದು ಹೇಳಿದ್ದರು ಎಂದು ಆರೋಪಿಸಲಾಗಿದೆ. ಇದೀಗ ಆ ಕುರಿತು ರಚಿತಾ ರಾಮ್​ ವಿರುದ್ದ ದೂರು ಕೂಡಾ ದಾಖಲಿಸಲಾಗಿದೆ.

Actress Rachit Ram
ನಟಿ ರಚಿತ ರಾಮ್​

By

Published : Jan 21, 2023, 12:06 PM IST

Updated : Jan 21, 2023, 1:23 PM IST

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ನ ಸದಸ್ಯ ಎಂ.ಸಿ.ಬಸವರಾಜು

ಮಂಡ್ಯ:ಕ್ರಾಂತಿ ಸಿನಿಮಾ ಕಾರ್ಯಕ್ರಮದಲ್ಲಿ ಗಣರಾಜ್ಯೋತ್ಸವದಂದು ಗಣರಾಜ್ಯೋತ್ಸವ ಮರೆತು ‘ಕ್ರಾಂತಿ ಉತ್ಸವ ಮಾಡಿ’ ಎಂದು ನಟಿ ರಚಿತಾ ರಾಮ್ ಹೇಳಿಕೆ ಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದ್ದು, ಇದೇ ವಿಚಾರವಾಗಿ ಸಕ್ಕರೆ ನಾಡು ಮಂಡ್ಯದಲ್ಲಿ ನಟಿ ರಚಿತಾ ರಾಮ್ ವಿರುದ್ದ ಆಕ್ರೋಶ ಭುಗಿಲೆದ್ದಿದೆ. ಭಾರತದ ಸಂವಿಧಾನದ ದಿನಕ್ಕೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ನಟಿ ರಚಿತಾ ರಾಮ್ ವಿರುದ್ಧ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ನಿಂದ ಮದ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

’’ನಟಿ ರಚಿತಾ ರಾಮ್ ಸಂವಿಧಾನ ದಿನಕ್ಕೆ ಅಪಮಾನ ಮಾಡಿ, ಕ್ರಾಂತಿ ಉತ್ಸವ ಮಾಡಿ ಅಂತಾ ಹೇಳಿದ್ದಾರೆ ಎಂದು ಆರೋಪಿಸಲಾಗಿದೆ. ಕನ್ನಡ ಚಿತ್ರರಂಗದಲ್ಲಿ ನಟನೆ ಮಾಡಲು ರಚಿತಾ ರಾಮ್​​ಗೆ ಯೋಗ್ಯತೆ ಇಲ್ಲ . ಕನ್ನಡ ಚಿತ್ರರಂಗದಿಂದ ಅವರನ್ನು ಬ್ಯಾನ್ ಮಾಡಿ. ರಚಿತಾ ರಾಮ್ ವಿರುದ್ದ ದೇಶ ದ್ರೋಹದ ಪ್ರಕರಣ ದಾಖಲಿಸಿ, ಈ ದೇಶದಿಂದ ಗಡಿ ಪಾರು ಮಾಡಿ ಅವರ ವಿರುದ್ಧ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಬೇಕು ‘‘ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ನ ಸದಸ್ಯ ಎಂ.ಸಿ.ಬಸವರಾಜು ಮದ್ದೂರಿನ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿ ಯಲ್ಲಿ ಒತ್ತಾಯಿಸಿದ್ದಾರೆ

ದೂರು ಪತ್ರ

ದೂರಿನ ಪ್ರತಿಯಲ್ಲಿ ಏನಿದೆ?: ’’ನಮ್ಮ ದೇಶಕ್ಕೆ ಸ್ವಾಂತ್ರಂತ್ಯ ಬಂದು 75 ವರ್ಷ ಕಳೆದರರೂ ದೇಶದ ಸಂವಿಧಾನಕ್ಕೆ ಒಂದಲ್ಲ ಒಂದು ರೀತಿಯಲ್ಲಿ ತೊಂದರೆಗಳು ಆಗುತ್ತಲೆ ಇವೆ. ಅದರಂತೆ ಕೆಲವು ದಿನಗಳ ಹಿಂದೆ ನಡೆದ ಕ್ರಾಂತಿ ಸಿನಿಮಾದ ಬೃಹತ್​ ಬಹಿರಂಗ ಕಾರ್ಯಕ್ರಮದಲ್ಲಿ ನಟಿ ರಚಿತಾ ರಾಮ್​ ಅವರು ಗಣರಾಜ್ಯೋತ್ಸವವನ್ನು ಪ್ರತಿ ವರ್ಷ ಜನವರಿ 26 ಕ್ಕೆ ಆಚರಿಸುತ್ತಿದ್ದೀರಿ, ಆದರೆ ಈ ಬಾರಿ ಗಣರಾಜ್ಯೋತ್ಸವ ಮರೆತು ಕ್ರಾಂತಿಯೋತ್ಸವ ಮಾಡಿ ಎಂದು ಹೇಳಿರುವುದು ಸಂವಿಧಾನದ ದಿನಕ್ಕೆ ಅಪಮಾನ ಮಾಡಿದಂತಾಗಿದೆ‘‘. ಎಂದು ಆರೋಪಿಸಲಾಗಿದೆ. ಈ ವಿಚಾರವಾಗಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್​ ಮಂಡ್ಯ ಜಿಲ್ಲಾ ಘಟಕ ಮತ್ತು ಮದ್ದೂರು ತಾಲೂಕು ಘಟಕದ ವತಿಯಿಂದ ಪೊಲೀಸ್​ ಠಾಣೆಯಲ್ಲಿ ನೀಡಲಾಗಿರುವ ದೂರಿನಲ್ಲಿ ಈ ಆರೋಪ ಮಾಡಲಾಗಿದೆ.

ಬಹು ನಿರೀಕ್ಷಿತ ಕ್ರಾಂತಿ ಬಿಡುಗಡೆಗೆ ಕ್ಷಣಗಣನೆ : ದರ್ಶನ್​ ಅಭಿನಯದ 55 ನೇ ಸಿನಿಮಾ ಕ್ರಾಂತಿಯಾಗಿದ್ದು. ದರ್ಶನ್ ಅವರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಜನವರಿ 7 ರಂದು ಈ ಸಿಮಾದ ಟ್ರೈಲರ್​ ರಿಲೀಸ್​ ಆಗಿತ್ತು. ಇನ್ನು ಚಿತ್ರದ ನಿರ್ದೇಶನ ಸಂಗೀತ ನಿರ್ದೇಶಕ ಹರಿಕೃಷ್ಣ ಅವರು ಮಾಡಿದ್ದು, ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ, ಹಾಗೂ ಹಿಂದಿ ಭಾಷೆಗಳಲ್ಲಿ ತೆರೆ ಕಾಣಲಿದೆ.

ಇದನ್ನೂಓದಿ:ಸೂರರೈ ಪೊಟ್ರು ನಟಿ ಜೊತೆ ಅನುಚಿತ ವರ್ತನೆ.. ಕಾನೂನು ಕಾಲೇಜ್​ನಿಂದ ವಿದ್ಯಾರ್ಥಿ ಅಮಾನತು

Last Updated : Jan 21, 2023, 1:23 PM IST

ABOUT THE AUTHOR

...view details