ಮಂಡ್ಯ: ಆನ್‌ಲೈನ್ ಕ್ಲಾಸ್ಗೆ ಹಾಜರಾಗಲೆಂದು ತಂದೆ ಮಗಳಿಗೆ ತನ್ನ ಮೊಬೈಲ್ ನೀಡಿದ್ದಾನೆ. ಈ ವೇಳೆ ಪರಸ್ತ್ರೀ ಜೊತೆ ಅಪ್ಪನ ರಾಸಲೀಲೆ ನೋಡಿದ ಮಗಳು ಶಾಕ್ ಆಗಿದ್ದು, ವಿಡಿಯೋವನ್ನು ಅಮ್ಮನಿಗೂ ತೋರಿಸಿದ್ದಾಳೆ. ಸದ್ಯ ಘಟನೆಯಿಂದ ದಂಪತಿ ಬದುಕಲ್ಲಿ ಬಿರುಕು ಮೂಡಿದೆ. ಈ ಪ್ರಕರಣ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ಕೊರೊನಾ ಸಂದರ್ಭದಲ್ಲಿ ಆನ್‌ಲೈನ್ ಕ್ಲಾಸ್ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ತಂದೆ ಕುಮಾರ್ ಮಗಳಿಗೆ ತನ್ನ ಮೊಬೈಲ್ ನೀಡಿದ್ದಾನೆ. ಕುಮಾರ್ನ ಮೊಬೈಲ್‌ನಲ್ಲಿ ಆನ್‌ಲೈನ್ ಕ್ಲಾಸ್ನಲ್ಲಿ ಭಾಗವಹಿಸಿದ ಮಗಳು ಬಳಿಕ ಮೊಬೈಲ್ನಲ್ಲಿದ್ದ ವಿಡಿಯೋಗಳನ್ನು ನೋಡಿದ್ದಾಳೆ. ಈ ವೇಳೆ ಪರಸ್ತ್ರೀಯ ಜೊತೆ ಪಲ್ಲಂಗದ ಸರಸದಲ್ಲಿ ತೊಡಗಿದ್ದ ಅಪ್ಪನ ವಿಡಿಯೋ ಕಂಡು ಆಘಾತಕ್ಕೊಳಗಾಗ ಮಗಳು ತನ್ನ ತಾಯಿಗೆ ಅಪ್ಪನ ರಾಸಲೀಲೆಯನ್ನು ತೋರಿಸಿದ್ದಾಳೆ.