ಕರ್ನಾಟಕ

karnataka

ETV Bharat / state

ಕೌಟುಂಬಿಕ ಕಲಹ : ಮಗನ ಮೇಲೆಯೇ ತಂದೆಯಿಂದ ಮಾರಣಾಂತಿಕ ಹಲ್ಲೆ - father attempts to kill son news

ಗಂಭೀರವಾಗಿ ಗಾಯಗೊಂಡಿದ್ದ ಪ್ರಸನ್ನನನ್ನು ಸ್ಥಳೀಯರು ಏಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳ ಪರಿಶೀಲಿಸಿದ ಪೊಲೀಸರು ದುಷ್ಕರ್ಮಿಗಳ ಪತ್ತೆಗಾಗಿ ಶೋಧ ತೀವ್ರಗೊಳಿಸಿದ್ದು, ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ..

father
ತಂದೆಯಿಂದ ಮಾರಣಾಂತಿಕ ಹಲ್ಲೆ

By

Published : Dec 25, 2020, 11:00 AM IST

ಮಂಡ್ಯ: ತಂದೆಯಿಂದಲೇ ಮಗನ ಹತ್ಯೆಗೆ ಯತ್ನ ನಡೆದಿರುವ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಅಂಚೆಭುವನಹಳ್ಳಿಯಲ್ಲಿ ಕಳೆದ ರಾತ್ರಿ ನಡೆದಿದೆ.

ತಂದೆಯಿಂದ ಮಾರಣಾಂತಿಕ ಹಲ್ಲೆ

ಪ್ರಸನ್ನ ಹಲ್ಲೆಗೊಳಗಾದ ವ್ಯಕ್ತಿ. ಆರೋಪಿ ಶಿವಲಿಂಗೇಗೌಡ ಕಿರಿಯ ಹೆಂಡತಿ ಮಗ ರಾಮಕೃಷ್ಣನೊಂದಿಗೆ ಸೇರಿ ಹಿರಿಯ ಹೆಂಡತಿ ಮಗನಾದ ಪ್ರಸನ್ನ ಮೇಲೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ಕೌಟುಂಬಿಕ ಕಲಹದಿಂದ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ.

ಕೌಟುಂಬಿಕ ಕಲಹ ಹಿನ್ನೆಲೆ ಊರು ಬಿಟ್ಟು ಬೆಂಗಳೂರಿನಲ್ಲಿ ವಾಸವಿರುವ ಶಿವಲಿಂಗೇಗೌಡ ಮತ್ತು ರಾಮಕೃಷ್ಣ ಕುಟುಂಬದವರು, ಪ್ರಸನ್ನನ ಕೊಲೆಗೆ ಯತ್ನಿಸಿ, ಈ ಕೃತ್ಯಕ್ಕೆಂದು ಬಳಸಿಕೊಂಡಿದ್ದ ಕಾರನ್ನೂ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಗಂಭೀರವಾಗಿ ಗಾಯಗೊಂಡಿದ್ದ ಪ್ರಸನ್ನನನ್ನು ಸ್ಥಳೀಯರು ಏಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳ ಪರಿಶೀಲಿಸಿದ ಪೊಲೀಸರು ದುಷ್ಕರ್ಮಿಗಳ ಪತ್ತೆಗಾಗಿ ಶೋಧ ತೀವ್ರಗೊಳಿಸಿದ್ದು, ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:ಹೊಸಪೇಟೆ : ಗ್ರಾಮ ಪಂಚಾಯತ್‌ ಅಭ್ಯರ್ಥಿ ಆತ್ಮಹತ್ಯೆಗೆ ಶರಣು

ABOUT THE AUTHOR

...view details