ಕರ್ನಾಟಕ

karnataka

ETV Bharat / state

ಇಂದು ಕೆ.ಆರ್.ಎಸ್‌ಗೆ ರೈತರ ಮುತ್ತಿಗೆ: ಪ್ರವಾಸಿಗರಿಗೆ ನಿರ್ಬಂಧ - undefined

ನಾಲೆಗಳಿಗೆ ನೀರು ಬಿಡುಗಡೆಗೆ ಆಗ್ರಹಿಸಿ ಇಂದು ರೈತರು ಕೆ.ಆರ್. ಎಸ್​ಗೆ ಮುತ್ತಿಗೆ ಹಾಕಲಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬೃಂದಾವನ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.

ಬೃಂದಾವನ

By

Published : Jun 28, 2019, 12:05 PM IST

ಮಂಡ್ಯ:ನಾಲೆಗಳಿಗೆ ನೀರು ಬಿಡುವಂತೆ ಆಗ್ರಹಿಸಿ ಇಂದು ರೈತರು ಕೆ.ಆರ್.ಎಸ್​ಗೆ ಮುತ್ತಿಗೆ ಹಾಕಲಿರುವ ಹಿನ್ನೆಲೆ ಬೃಂದಾವನ ಪ್ರವೇಶಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹಾಕಲಾಗಿದೆ.

ಮಧ್ಯಾಹ್ನದವರೆಗೂ ರಾಜ್ಯ ಸರ್ಕಾರಕ್ಕೆ ಗಡುವು ನೀಡಿರುವ ರೈತರು, ಮಧ್ಯಾಹ್ನದ ವೇಳೆಗೆ ಅಣೆಕಟ್ಟೆಗೆ ಮುತ್ತಿಗೆ ಹಾಕಲಿದ್ದಾರೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಪ್ರವಾಸಿಗರಿಗೆ ನಿಷೇಧ ಹೇರಲಾಗಿದ್ದು, ಕೆ.ಆರ್.ಎಸ್ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಕೆ.ಆರ್.ಎಸ್ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ಭದ್ರತೆಗಾಗಿ ಕೆಎಸ್ಆರ್​ಪಿ ಹಾಗೂ ಡಿಎಆರ್ ಪೊಲೀಸರನ್ನು ನಿಯೋಜಿಸಲಾಗಿದೆ. ಮಂಡ್ಯದಿಂದ ತೂಬಿನಕೆರೆ, ದೊಡ್ಡ ಬ್ಯಾಡರಹಳ್ಳಿ, ಪಾಂಡವಪುರ, ಅರಳಕುಪ್ಪೆ ಮಾರ್ಗವಾಗಿ ರೈತರು ಕೆ.ಆರ್.ಎಸ್ ತಲುಪಲಿದ್ದಾರೆ.

For All Latest Updates

TAGGED:

ABOUT THE AUTHOR

...view details