ಮಂಡ್ಯ: ಬೆಳೆ ರಕ್ಷಣೆಗಾಗಿ ರೈತರು ನಡೆಸುತ್ತಿರುವ ಸರಣಿ ಹೋರಾಟ ಇಂದೂ ಮುಂದುವರೆದಿದೆ. ಜಿಲ್ಲೆಯ ಹಲವು ಕಡೆ ಹೆದ್ದಾರಿ ಬಂದ್ ಮಾಡಿ ರೈತರು ಹೋರಾಟ ಮಾಡಿದ್ದಾರೆ.
ನೀರಿಗಾಗಿ ಜಿಲ್ಲಾದ್ಯಂತ ರೈತರ ಹೋರಾಟ; ರಸ್ತೆ ತಡೆ ಚಳವಳಿ - kannada news
ಬೆಳೆ ರಕ್ಷಣೆಗಾಗಿ ರೈತರು ನಡೆಸುತ್ತಿರುವ ಸರಣಿ ಹೋರಾಟ ಇಂದೂ ಮುಂದುವರೆದಿದೆ. ಮಂಡ್ಯ ಜಿಲ್ಲೆಯ ಹಲವು ಕಡೆ ಹೆದ್ದಾರಿ ಬಂದ್ ಮಾಡಿ ರೈತರು ಹೋರಾಟ ಮಾಡಿದ್ದು, ಜಿಲ್ಲಾ ಪೊಲೀಸರು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ.
ನೀರಿಗಾಗಿ ಜಿಲ್ಲಾದ್ಯಂತ ರೈತರ ಹೋರಾಟ; ರಸ್ತೆ ತಡೆ ಚಳವಳಿ
ಜಿಲ್ಲೆಯ ಶ್ರೀರಂಗಪಟ್ಟಣ, ಮದ್ದೂರು, ಕೆ.ಎಂ. ದೊಡ್ಡಿ ಹಾಗೂ ಮಳವಳ್ಳಿ ಪಟ್ಟಣದಲ್ಲಿ ರೈತರು ಪ್ರತಿಭಟನೆ ಮಾಡಿ, ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆ.ಆರ್.ಎಸ್ ಅಣೆಕಟ್ಟಿನಿಂದ ನೀರು ಬಿಡಬೇಕು. ಬೆಳೆದು ನಿಂತಿರುವ ಕಬ್ಬಿನ ರಕ್ಷಣೆ ಮಾಡಬೇಕು ಎಂದು ಒತ್ತಾಯ ಮಾಡಿದರು. ಬೆಳೆದು ನಿಂತ ಬೆಳೆಗಳಿಗೆ ನೀರು ಬಿಡದಿದ್ದರೆ ರೈತರ ಆತ್ಮಹತ್ಯೆ ಸಂಖ್ಯೆ ಹೆಚ್ಚಾಗುವ ಬಗ್ಗೆ ಎಚ್ಚರಿಕೆ ನೀಡಿದರು.
ಜಿಲ್ಲಾ ಪೊಲೀಸರು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ.
Last Updated : Jul 8, 2019, 9:36 AM IST