ಮಂಡ್ಯ:ಕೃಷಿ ಪತ್ತಿನ ಸಹಕಾರ ಸಂಘದ ಅಧಿಕಾರಿಗಳು ಮತ್ತು ನಿರ್ದೇಶಕ ಮಂಡಳಿಯ ಯಡವಟ್ಟಿನಿಂದಾಗಿ ಮಳವಳ್ಳಿ ತಾಲೂಕಿನ ಲಿಂಗಪಟ್ಟಣ ಗ್ರಾಮದ 53 ರೈತರ ಸಾಲಮನ್ನಾವಾಗದೇ ರೈತರು ಕಂಗಾಲಾಗಿದ್ದಾರೆ.
ಅಧಿಕಾರಿಗಳ ಯಡವಟ್ಟಿನಿಂದ ಮನ್ನಾ ಆಗದ ರೈತರ ಸಾಲ.. ಮಂಡ್ಯದ ಅನ್ನದಾತರ ಆಕ್ರೋಶ - ಸಾಲಮನ್ನಾ
ಕೃಷಿ ಪತ್ತಿನ ಸಹಕಾರ ಸಂಘದ ಅಧಿಕಾರಿಗಳು ಮತ್ತು ನಿರ್ದೇಶಕ ಮಂಡಳಿಯ ಯಡವಟ್ಟಿನಿಂದಾಗಿ ಮಳವಳ್ಳಿ ತಾಲೂಕಿನ ಲಿಂಗಪಟ್ಟಣ ಗ್ರಾಮದ 53 ರೈತರ ಸಾಲಮನ್ನವಾಗಿಲ್ಲ. ಇದರಿಂದಾಗಿ ರೈತರು ಕಂಗಾಲಾಗಿದ್ದು, ಕೃಷಿ ಪತ್ತಿನ ಸಹಕಾರ ಸಂಘದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
![ಅಧಿಕಾರಿಗಳ ಯಡವಟ್ಟಿನಿಂದ ಮನ್ನಾ ಆಗದ ರೈತರ ಸಾಲ.. ಮಂಡ್ಯದ ಅನ್ನದಾತರ ಆಕ್ರೋಶ](https://etvbharatimages.akamaized.net/etvbharat/prod-images/768-512-4019903-thumbnail-3x2-sow.jpg)
ಕೃಷಿ ಪತ್ತಿನ ಸಹಕಾರ ಸಂಘದ ಅಧಿಕಾರಿಗಳು ಮತ್ತು ನಿರ್ದೇಶಕ ಮಂಡಳಿಯ ಅಧಿಕಾರಿಗಳು ಡಿಸಿಸಿ ಬ್ಯಾಂಕ್ಗೆ ಸಾಲ ಮನ್ನಾದ ಮಾಹಿತಿಯನ್ನು ಸರಿಯಾಗಿ ನೀಡದ ಹಿನ್ನೆಲೆಯಲ್ಲಿ 53 ರೈತರು ಪಡೆದ ಸಾಲ ಮನ್ನಾ ಆಗಿಲ್ಲ. ಇದರಿಂದ ರೈತರು ಕಂಗಾಲಾಗಿದ್ದಾರೆ. ಸರ್ಕಾರವೇನೋ ರೈತರಿಗೆ ಅನುಕೂಲವಾಗಲಿ ಎಂದು ಸಾಲ ಮನ್ನಾ ಮಾಡಿದೆ. ಆದರೆ, ಅಧಿಕಾರಿಗಳ ಯಡವಟ್ಟು ರೈತರನ್ನು ಸಂಕಷ್ಟಕ್ಕೆ ದೂಡಿದೆ. ಸಾಲ ಮರುಪಾವತಿ ಮಾಡಿ ಎಂದು ರೈತರಿಗೆ ನೋಟಿಸ್ ನೀಡಲಾಗಿದೆ.
ಇದರಿಂದ ಆಕ್ರೋಶಗೊಂಡ ರೈತರು, ಅಧಿಕಾರಿಗಳು ಮತ್ತು ಆಡಳಿತ ಮಂಡಳಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಅಲ್ಲದೇ, ಸಾಲ ಮನ್ನಾ ಹಾಗೂ ಸಾಲ ಮರುಪಾವತಿಯ ನೋಟಿಸ್ನ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ರೈತರು, ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದಾರೆ.