ಮಂಡ್ಯ:ರೈತರ ಜಮೀನಿನಲ್ಲಿ ಬೆಳೆ ಕದಿಯುತ್ತಿದ್ದ ವೇಳೆ ಕಳ್ಳರು ಸಿಕ್ಕಿಬಿದ್ದಿರುವ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕೊಡಾಲ ಗ್ರಾಮದಲ್ಲಿ ನಡೆದಿದೆ. ಯುವಕರು ತಡರಾತ್ರಿ ದೇವರಾಜು ಎಂಬವರ ಜಮೀನಿನಲ್ಲಿ ಬೆಳೆದಿದ್ದ ಬಾಳೆಗೊನೆ ಕದಿಯುತ್ತಿದ್ದಾಗ ಕದ್ದ ಬೆಳೆಯ ಜೊತೆಗೆ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಬೆಳೆ ಕದಿಯುವಾಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಯುವಕರು - ಯುವಕರ ಹಿತದೃಷ್ಟಿ
ಗ್ರಾಮಗಳ ನಡುವಿನ ಸಾಮರಸ್ಯ ಹಾಳಾಗುವ ದೃಷ್ಟಿಯಿಂದ ಹಾಗೂ ಯುವಕರ ಹಿತದೃಷ್ಟಿಯಿಂದ ಪೊಲೀಸರ ಕೈಗೆ ಒಪ್ಪಿಸದೆ, ದೇವಾಲಯದ ಮುಂದೆ ಆಣೆ ಪ್ರಮಾಣ ಮಾಡಿಸಿ, ಬುದ್ಧಿ ಹೇಳಿ ಗ್ರಾಮಸ್ಥರು ಬಿಡುಗಡೆ ಮಾಡಿದ್ದಾರೆ.
ಬೆಳೆ ಕದಿಯುವಾಗಲೇ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಯುವಕರು
ಎರೇಗೌಡನಹಳ್ಳಿ ಗ್ರಾಮದ ಸಂತೋಷ್, ಭಾಸ್ಕರ್, ನಿಶಾಂತ್ ಕಳ್ಳತನ ಮಾಡಲು ಹೋಗಿ ಸಿಕ್ಕಿಬಿದ್ದ ಯುವಕರು. ಗ್ರಾಮಗಳ ನಡುವಿನ ಸಾಮರಸ್ಯ ಹಾಳಾಗುವ ದೃಷ್ಟಿಯಿಂದ ಸಿಕ್ಕಿಬಿದ್ದ ಕಳ್ಳರಿಗೆ ಬೆಳೆ ನಷ್ಟದ ದಂಡ ವಿಧಿಸಿದ್ದಾರೆ. ಯುವಕರ ಹಿತದೃಷ್ಟಿಯಿಂದ ಪೊಲೀಸರ ಕೈಗೆ ಒಪ್ಪಿಸದೆ, ದೇವಾಲಯದ ಮುಂದೆ ಆಣೆ ಪ್ರಮಾಣ ಮಾಡಿಸಿ, ಬುದ್ಧಿ ಹೇಳಿ ಗ್ರಾಮಸ್ಥರು ಬಿಡುಗಡೆ ಮಾಡಿದರು. ಈ ಯುವಕರು ಹಲವಾರು ತಿಂಗಳುಗಳಿಂದ ಸುತ್ತಮುತ್ತಲ ಗ್ರಾಮಗಳಲ್ಲಿ ರೈತರ ಬೆಳೆ ಕಳ್ಳತನ ಮಾಡುತ್ತಿದ್ದರು.
ಇದನ್ನೂ ಓದಿ:ಕುಖ್ಯಾತ ಆಟೋ ಕಳ್ಳರ ಬಂಧನ: 15 ಲಕ್ಷ ರೂ ಮೌಲ್ಯದ ಆಟೋ, ಬೈಕ್ ವಶ