ಮಂಡ್ಯ:ಲಾಕ್ಡೌನ್ ಹಿನ್ನೆಲೆ ಬೆಳೆಗಳನ್ನ ಮಾರಲು ಸಾಧ್ಯವಾಗದೆ ಸಾಲದ ಹೊರೆ ಹೆಚ್ಚಾಗಿ ರೈತ ನೇಣಿಗೆ ಶರಣಾದ ಘಟನೆ ಪಾಂಡವಪುರ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬೆಳೆ ನಾಶ, ಸಾಲದ ಹೊರೆಗೆ ನೊಂದ ರೈತ ನೇಣಿಗೆ ಶರಣು
ಬೆಳನಾಶ ಜೊತೆಗೆ ಬೆಳೆ ಸಾಲ ತೀರಿಸಲು ಸಾಧ್ಯವಾಗಿದೆ ಮಾನಸಿಕವಾಗಿ ಜರ್ಜರಿತನಾಗಿ ರೈತ ನೇಣಿಗೆ ಶರಣಾದ ಘಟನೆ ಪಾಂಡವಪುರ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ರಾಮೇಗೌಡ (65) ಮೃತ ರೈತ. ಈತ ಸುಮಾರು ಎರಡು ಎಕರೆ ಜಮೀನಿನಲ್ಲಿ ಟೊಮ್ಯಾಟೊ ಹಾಗೂ ಬೀನ್ಸ್ ಬೆಳೆದಿದ್ದ. ಎರಡೂ ಬೆಳೆಗಳ ಉತ್ತಮ ಫಸಲು ಬಂದಿದ್ದು, ಇದನ್ನು ಮಾರಲಾಗದೇ ತಾನೇ ನಾಶ ಮಾಡಿದ್ದ. ಜಮೀನಿನಲ್ಲಿ ಬೆಳೆ ಬೆಳೆಯಲು ಸುಮಾರು ಐದು ಲಕ್ಷ ರೂಪಾಯಿಗೂ ಹೆಚ್ಚು ಸಾಲ ಮಾಡಿಕೊಂಡಿದ್ದ ಎಂದು ಮೇಲುಕೋಟೆ ಪೊಲೀಸರಿಗೆ ದೂರು ನೀಡಲಾಗಿದೆ.
ಬೆಳನಾಶ ಜೊತೆಗೆ ಬೆಳೆ ಸಾಲ ತೀರಿಸಲು ಸಾಧ್ಯವಾಗಿದೆ ಮಾನಸಿಕವಾಗಿ ಜರ್ಜರಿತನಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ಮೇಲುಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ರೈತನ ಕುಟುಂಬಸ್ಥರು ಪರಿಹಾರಕ್ಕೆ ಒತ್ತಾಯ ಮಾಡಿದ್ದಾರೆ.