ಕರ್ನಾಟಕ

karnataka

ETV Bharat / state

ಸಾಲ ಮನ್ನಾ ವಿಚಾರವಾಗಿ ಕಿರುಕುಳ: ಮೊಬೈಲ್ ಟವರ್ ಏರಿದ ರೈತನಿಂದ ಆತ್ಮಹತ್ಯೆ ಬೆದರಿಕೆ - ಮಂಡ್ಯ ಟವರ್ ಏರಿ ಆತ್ಮಹತ್ಯೆ ಬೆದರಿಕೆ

ಈ ಹಿಂದಿನ ಸರ್ಕಾರದ ಅವಧಿಯಲ್ಲಿ ರೈತರ ಸಾಲ ಮನ್ನಾ ಮಾಡಲಾಗಿದೆ. ಸಹಕಾರಿ ಬ್ಯಾಂಕ್​ ಅಧಿಕಾರಿಗಳು ನನ್ನ ಸಾಲ ಮನ್ನಾ ಮಾಡದೆ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ ರೈತ ಮೊಬೈಲ್​ ಟವರ್​​ ಏರಿ ಆತ್ಮಹತ್ಯೆ ಬೆದರಿಕೆ ಹಾಕಿದ್ದಾನೆ.

climbing the tower
ಟವರ್​​ ಏರಿದ ರೈತ

By

Published : Jul 21, 2020, 2:36 PM IST

ಮಂಡ್ಯ:ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಆಡಳಿತದಲ್ಲಿ ರೈತರಿಗೆ ಮಾಡಲಾದ ಸಾಲ ಮನ್ನಾ ಯೋಜನೆಯಡಿ ನನ್ನ ಸಾಲ ಮನ್ನಾ ಮಾಡದೆ, ಸಹಕಾರಿ ಬ್ಯಾಂಕ್ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ ರೈತ ಮೊಬೈಲ್ ಟವರ್ ಏರಿ ಆತ್ಮಹತ್ಯೆ ಬೆದರಿಕೆ ಹಾಕಿದ ಘಟನೆ ಕೆ.ಆರ್ ವೃತ್ತದ ಬಳಿ ನಡೆದಿದೆ.

ಟವರ್​​ ಏರಿದ ರೈತ

ಮದ್ದೂರು ತಾಲೂಕಿನ ಬಿದರಮೊಳೆ ಗ್ರಾಮದ ರೈತ ಮೋಹನ್ ಆತ್ಮಹತ್ಯೆ ಬೆದರಿಕೆ ಹಾಕಿದ ವ್ಯಕ್ತಿ. ಬೆಕ್ಕಳಲೆ ಗ್ರಾಮದ ಪ್ರಾಥಮಿಕ ಸಹಕಾರ ಸಂಘದಲ್ಲಿ ತನ್ನ ಸಾಲಮನ್ನಾ ಯೋಜನೆಯಿಂದ ಹೊರಗಿಟ್ಟಿರುವ ಆರೋಪ ಮಾಡಿ ಟವರ್ ಏರಿ ಆತಂಕ ಸೃಷ್ಟಿಸಿದ್ದಾನೆ. ತನ್ನ ಸಾಲಮನ್ನಾ ಮಾಡದೆ ಉದ್ದೇಶಪೂರ್ವಕವಾಗಿ ಕಿರುಕುಳ ನೀಡಲಾಗುತ್ತಿದೆ‌. ಈ ಬಗ್ಗೆ ನಾನು ಕಾನೂನು ಹೋರಾಟ ಮಾಡಿದರೂ ನ್ಯಾಯ ಸಿಕ್ಕಿಲ್ಲ. ತನ್ನ ಸಾವಿಗೆ ಪ್ರಾಥಮಿಕ ಸಂಘದ ಇಒ, ಆಡಳಿತ ಮಂಡಳಿ, ಕೊಪ್ಪ ಡಿಸಿಸಿ ಬ್ಯಾಂಕ್ ಮೇಲ್ವಿಚಾರಕರು ಹಾಗೂ ಡಿ.ಆರ್ ಕಾರಣರೆಂದು ಪತ್ರ ಬರೆದು ಮೋಹನ್ ಟವರ್ ಏರಿದ್ದ.

ರೈತ ಬರೆದಿರುವ ಪತ್ರ

ಟವರ್ ಮೇಲೇರಿ ಆತ್ಮಹತ್ಯೆ ಬೆದರಿಕೆ ಹಾಕಿದ್ದ ರೈತನ‌ ಮನವೊಲಿಸಿದ ಅಗ್ನಿಶಾಮಕ ಸಿಬ್ಬಂದಿ, ನಂತರ ಟವರ್ ಏರಿ ಆತನನ್ನು ಕೆಳಗಿಳಿಸಿದರು.

ABOUT THE AUTHOR

...view details