ಮಂಡ್ಯ :ಕಳೆದ 34 ದಿನಗಳಿಂದ ಜಿಲ್ಲೆಯಲ್ಲಿ ರೈತರು ಧರಣಿ ನಡೆಸುತ್ತಿದ್ದಾರೆ. ಇಷ್ಟು ದಿನ ಕಳೆದರೂ ಸಂಸದರೆ ಸುಮಲತಾ ಅಂಬರೀಶ್ ಧರಣಿ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷೆ ಸುನಂದಾ ಜಯರಾಮ್ ಅಸಮಾಧಾನ ವ್ಯಕ್ತಪಡಿಸಿದರು.
ಧರಣಿ ನಡೆಸುತ್ತಿರುವ ರೈತ ಹಿತರಕ್ಷಣಾ ಸಮಿತಿ ರೈತರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದೆ ಸುಮಲತಾ ಅವರು ಒಮ್ಮೆಯಾದ್ರೂ ಮೈ ಶುಗರ್ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲೇ ಉಳಿಯಬೇಕು ಎಂಬ ನಿಲುವಿಗೆ ಬರಲಿಲ್ಲ.
ಕಾರ್ಖಾನೆ ವಿಚಾರದಲ್ಲಿ ಜಿಲ್ಲೆಯಲ್ಲಿ ಏಕಧ್ವನಿ ಹೊರ ಹೊಮ್ಮಿರುವಾಗ ಸಂಸದರು ಸಹ ಈ ನಿರ್ಧಾರಕ್ಕೆ ಕೈಜೊಡಿಸಬೇಕು. ಆದರೆ, ಈವರೆಗೂ ಸಂಸದರು ಯಾವುದೇ ಮಾತು ಆಡಿಲ್ಲ ಎಂದು ಬೇಸರ ಹೊರ ಹಾಕಿದರು.
ರೈತರಿಗೆ ಯಾವುದೇ ತೊಂದರೆಯಾಗಬಾರದೆಂಬ ನಿಟ್ಟಿನಲ್ಲಿ ಹೋರಾಟ ಮಾಡುತ್ತಿದ್ದೇವೆ. ಸಂಸದರು ಸ್ಪಷ್ಟವಾಗಿ ತಮ್ಮ ನಿಲುವನ್ನು ಹೇಳಬೇಕು ಎಂದು ಬೇಸರದಿಂದಲೇ ಮನವಿ ಮಾಡಿದರು.
ಇದನ್ನೂ ಓದಿ: ರಾಜ್ಯದಲ್ಲಿಂದು 326 ಮಂದಿಗೆ ಕೊರೊನಾ ದೃಢ : 4 ಸೋಂಕಿತರು ಬಲಿ