ಕರ್ನಾಟಕ

karnataka

ETV Bharat / state

ಕೊಳವೆ ಬಾವಿ ತೋಡಿಸಲೆಂದೇ ಸಾಲ ಮಾಡಿಕೊಂಡಿದ್ದ ರೈತ ನೇಣಿಗೆ ಶರಣು - ಹಾಸನ ರೈತ ನೇಣಿಗೆ ಶರಣು

ಕೊಳವೆ ಬಾವಿ ತೋಡಿಸಲು ಲಕ್ಷಗಟ್ಟಲೇ ಸಾಲ ಮಾಡಿಕೊಂಡಿದ್ದ ರೈತ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಬಾವಿ ತೋಡಿಸಲೆಂದೇ ಮೈತುಂಬ ಸಾಲ ಮಾಡಿಕೊಂಡಿದ್ದ ರೈತ ನೇಣಿಗೆ ಶರಣು

By

Published : Nov 11, 2019, 1:46 PM IST

ಮಂಡ್ಯ:ಸಾಲಬಾಧೆಗೆ ಸಿಲುಕಿ ರೈತ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೆ.ಆರ್. ಪೇಟೆ ತಾಲೂಕಿನ ದೊಡ್ಡ ಸೋಮಹಳ್ಳಿಯಲ್ಲಿ ನಡೆದಿದೆ.

ಕೊಳವೆ ಬಾವಿ ತೋಡಿಸಲೆಂದೇ ಸಾಲ ಮಾಡಿಕೊಂಡಿದ್ದ ರೈತ ನೇಣಿಗೆ ಶರಣು

ಗ್ರಾಮದ ಭದ್ರೇಗೌಡ (56) ಎಂಬವರೇ ಆತ್ಮಹತ್ಯೆ ಮಾಡಿಕೊಂಡ ರೈತ. ಈತ ಕೊಳವೆ ಬಾವಿ ತೋಡಿಸಲು ಲಕ್ಷಗಟ್ಟಲೇ ಸಾಲ ಮಾಡಿಕೊಂಡಿದ್ದ. ತನ್ನ ಜಮೀನಿನಲ್ಲಿ 5ಕ್ಕೂ ಹೆಚ್ಚು ಕೊಳವೆ ಬಾವಿ ಕೊರೆಸಿದ್ದ ಈತ ಸುಮಾರು 8 ಲಕ್ಷ ರೂಪಾಯಿಗೂ ಹೆಚ್ಚು ಸಾಲ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ.

ಅಷ್ಟೇ ಅಲ್ಲದೇ, ಎಸ್.ಬಿ.ಐ ಬ್ಯಾಂಕ್​ ಸಾಲ ಸೇರಿದಂತೆ ಹಲವೆಡೆ ಕೈ ಸಾಲ ಮಾಡಿಕೊಂಡಿದ್ದನಂತೆ. ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಕೆ.ಆರ್. ಪೇಟೆ ಪಟ್ಟಣ ಪೊಲೀಸ್ ಠಾಣೆಗೆ ಮೃತನ ಪತ್ನಿ ದೂರು ನೀಡಿದ್ದಾರೆ. ಸ್ಥಳಕ್ಕೆ ಅನರ್ಹ ಶಾಸಕ ನಾರಾಯಣಗೌಡ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

ABOUT THE AUTHOR

...view details