ಕರ್ನಾಟಕ

karnataka

ETV Bharat / state

ಪರಿಹಾರ ಕೇಳಿದ್ದಕ್ಕಾಗಿ ಅಧಿಕಾರಿಗಳಿಂದ ಧಮ್ಕಿ ಆರೋಪ: ವಿದ್ಯುತ್​ ​ಕಂಬ ಏರಿ ಕುಳಿತ ರೈತ! - ‘armer trying to commit suicide in Chikkasomanahalli in Mandya

ಬೆಳೆ ಪರಿಹಾರ ಕೇಳಿದ್ದಕ್ಕೆ ಅಧಿಕಾರಿಗಳು ಬೆದರಿಕೆ ಹಾಕಿದ್ದಾರೆ ಅಂತಾ ನೊಂದ ರೈತ ಹೈಟೆನ್ಷನ್​​ ವಿದ್ಯುತ್ ಕಂಬ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೆ.ಆರ್.ಪೇಟೆ ತಾಲೂಕಿನ ಚಿಕ್ಕ ಸೋಮನಹಳ್ಳಿಯಲ್ಲಿ ನಡೆದಿದೆ.

farmer attempted suicide in Mandya
ವಿದ್ಯುತ್ ​ಟವರ್​ ಏರಿ ಆತ್ಮಹತ್ಯೆಗೆ ಯತ್ನಿಸಿದ ರೈತ

By

Published : Dec 12, 2019, 9:32 AM IST

ಮಂಡ್ಯ:ಬೆಳೆ ಪರಿಹಾರ ಕೇಳಿದ್ದಕ್ಕೆ ಅಧಿಕಾರಿಗಳು ಬೆದರಿಕೆ ಹಾಕಿದ್ದಾರೆ ಅಂತಾ ನೊಂದ ರೈತ ಹೈಟೆನ್ಷನ್​​ ವಿದ್ಯುತ್ ಕಂಬ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೆ.ಆರ್.ಪೇಟೆ ತಾಲೂಕಿನ ಚಿಕ್ಕ ಸೋಮನಹಳ್ಳಿಯಲ್ಲಿ ನಡೆದಿದೆ.

ವಿದ್ಯುತ್ ​ಕಂಬ​ ಏರಿ ಆತ್ಮಹತ್ಯೆಗೆ ಯತ್ನಿಸಿದ ರೈತ

ಕುಮಾರ್, ವಿದ್ಯುತ್ ಕಂಬ ಏರಿದ ಆತ್ಮಹತ್ಯೆಗೆ ಯತ್ನಿಸಿದ ರೈತ. ಕುಮಾರ್​ ಸೂಕ್ತ ಬೆಳೆ ಪರಿಹಾರಕ್ಕಾಗಿ ಅಧಿಕಾರಿಗಳಿಗೆ ಮನವಿ ಮಾಡಿದ್ದನಂತೆ. ಆದರೆ ಪರಿಹಾರದ ನೀಡಬೇಕಾದ ಅಧಿಕಾರಿಗಳು ಪೊಲೀಸರಿಂದ ಧಮ್ಕಿ ಹಾಕಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇದರಿಂದ ಬೇಸತ್ತ ಕುಮಾರ್​, ತನ್ನ ಜಮೀನಿನಲ್ಲಿರುವ ವಿದ್ಯುತ್​ ಕಂಬ ಏರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕುಮಾರ್​ ಮನವೊಲಿಕೆಗೆ ಸ್ಥಳೀಯರು ಎಷ್ಟೇ ಪ್ರಯತ್ನಪಟ್ಟರು ವಿದ್ಯುತ್​ ಕಂಬದಿಂದ ಕೆಳಗಿಳಿದಿಲ್ಲ. ಆದ್ದರಿಂದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ.

ABOUT THE AUTHOR

...view details