ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ಊರಿನಲ್ಲಿದ್ರೆ ಕೊರೊನಾ ಸೋಂಕು ಹರಡುತ್ತದೆ ಎಂಬ ಭಯದಿಂದ ಕುಟುಂಬವೊಂದು ಊರು ತೊರೆದು ಜಮೀನು ಸೇರಿಕೊಂಡಿದೆ.
ಕೊರೊನಾ ಭಯ: ಊರು ಬಿಟ್ಟು ಜಮೀನಿನ ಬಳಿ ಕುಟುಂಬವೊಂದರ ವಾಸ್ತವ್ಯ - ಕೊರೊನಾ ಭಯಕ್ಕೆ ಊರು ಬಿಟ್ಟು ಜಮೀನಿನಲ್ಲಿ ವಾಸ
ಕೊರೊನಾ ಸೋಂಕಿಗೆ ಹೆದರಿ ಕುಟುಂಬವೊಂದು ಊರು ತೊರೆದು ತಮ್ಮ ಜಮೀನಿನಲ್ಲಿ ಗುಡಿಸಲು ಹಾಕಿಕೊಂಡು ವಾಸ ಮಾಡುತ್ತಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
family
ಗ್ರಾಮದ ಶಿವಣ್ಣ ಅವರ ಮಗ ಕುಮಾರ್ ಎಂಬವರು ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳ ಜತೆ ಪಾಲಹಳ್ಳಿಯಿಂದ ಒಂದೂವರೆ ಕಿ.ಮೀ ದೂರದ ತಮ್ಮ ಜಮೀನಿನ ಮೂಲೆಯಲ್ಲಿ ಗುಡಿಸಲು ಕಟ್ಟಿಕೊಂಡು ಕಳೆದ 20 ದಿನಗಳಿಂದ ವಾಸ ಮಾಡುತ್ತಿದ್ದಾರೆ.
ಗ್ರಾಮದ ಹಳ್ಳದಕೇರಿ ಪ್ರದೇಶದಲ್ಲಿ ಕುಮಾರ್ ಅವರಿಗೆ ಸ್ವಂತ ಮನೆ ಇದೆ. ಆದರೆ, ಇವರ ಮನೆಯ ಆಸುಪಾಸಿನಲ್ಲಿ ಐವರಿಗೆ ಕೊರೊನಾ ಸೋಂಕು ತಗುಲಿದೆ. ಇದರಿಂದ ಗಾಬರಿಗೊಂಡಿರುವ ಕುಮಾರ್, ತಮ್ಮ ಇಬ್ಬರು ಮಕ್ಕಳು ಮತ್ತು ಪತ್ನಿ ಸಮೇತ ಮನೆ ಖಾಲಿ ಮಾಡಿಕೊಂಡು ಜಮೀನು ಸೇರಿಕೊಂಡಿದ್ದಾರೆ. ಗ್ರಾಮದ ಜನರು ಧೈರ್ಯ ತುಂಬಿದರೂ ಊರಿಗೆ ಬರಲು ಒಪ್ಪದೆ ಅಲ್ಲಿಯೇ ವಾಸ ಮಾಡ್ತಿದ್ದಾರೆ.