ಕರ್ನಾಟಕ

karnataka

ETV Bharat / state

ಮಂಡ್ಯದಲ್ಲಿ ನಕಲಿ ವೋಟರ್ ಐಡಿ ಮಾಡಿಕೊಡ್ತಿದ್ದ ದಂಪತಿ ಅರೆಸ್ಟ್: ಇದು ಈಟಿವಿ ಭಾರತ ಇಂಪ್ಯಾಕ್ಟ್​ - ಮಂಡ್ಯದಲ್ಲಿ ನಕಲಿ ವೋಟರ್ ಐಡಿ ಮಾಡಿಕೊಡ್ತಿದ್ದ ದಂಪತಿ ಅರೆಸ್ಟ್

ಮಂಡ್ಯದಲ್ಲಿ ನಕಲಿ ಪಾಸ್​ಪೋರ್ಟ್​, ಎಲೆಕ್ಷನ್​ ಐಡಿ ಮಾಡಿಕೊಡುತ್ತಿದ್ದ ಸಿಎಸ್​​ಸಿ ಕೇಂದ್ರದ ಮೇಲೆ ದಾಳಿ ನಡೆಸಿ ಆರೋಪಿ ದಂಪತಿಯನ್ನು ಬಂಧಿಸಲಾಗಿದೆ. ಇದು ಈಟಿವಿ ಭಾರತ ವರದಿ ಫಲಶ್ರುತಿಯಾಗಿದೆ.

fake voter ID creating couple arrested in mandya
ತಹಶೀಲ್ದಾರ್​ ನೇತೃತ್ವದಲ್ಲಿ ದಾಳಿ

By

Published : Sep 1, 2021, 5:34 PM IST

ಮಂಡ್ಯ: ಜೆಡಿಎಸ್​ ಕಾರ್ಯಾಲಯದಲ್ಲಿ ದಂಪತಿ ನಕಲಿ ಪಾಸ್ ಪೋರ್ಟ್, ವೋಟರ್ ಐಡಿ ಮಾಡಿಕೊಡುತ್ತಿದ್ದ ಪ್ರಕರಣ ಕುರಿತು 'ಈಟಿವಿ ಭಾರತ' ವರದಿ ಮಾಡಿದ ಬೆನ್ನಲ್ಲೇ ಮಂಡ್ಯ ತಹಶೀಲ್ದಾರ್ ಚಂದ್ರಶೇಖರ್ ಶಂ ಗಾಳಿ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಡಿ.ಕೆ.ಹೆಚ್. ಅಸೋಸಿಯೇಟ್

ಇದನ್ನೂ ಓದಿ:ಈ ಪಕ್ಷದ​ ಕಾರ್ಯಾಲಯದಲ್ಲಿ ನಕಲಿ ಐಡಿ ಪಾಸ್​ಪೋರ್ಟ್ ದಂಧೆ ಆರೋಪ: ದಂಪತಿ ವಿರುದ್ಧ ದೂರು

ಮಂಡ್ಯದ ಹೊಳಲು ರಸ್ತೆಯಲ್ಲಿರುವ ಡಿ.ಕೆ. ಹೆಚ್. ಅಸೋಸಿಯೇಟ್ ಹೆಸರಿನ CSC ಕೇಂದ್ರದ ಮೇಲೆ ದಾಳಿ ನಡೆಸಿ ನಕಲಿ ಐಡಿಗಳನ್ನು ಸೃಷ್ಟಿಸಲು ಬಳಸುತ್ತಿದ್ದ ಲ್ಯಾಪ್​ಟಾಪ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಫೇಕ್​ ಐಡಿ ಮಾಡಿಕೊಡುತ್ತಿದ್ದ ಸಿಎಸ್​ಸಿ ಕೇಂದ್ರಕ್ಕೆ ಬೀಗ ಹಾಕಿಸಿದ್ದಾರೆ.

ತಹಶೀಲ್ದಾರ್​ ನೇತೃತ್ವದಲ್ಲಿ ದಾಳಿ

ತಹಶೀಲ್ದಾರ್ ವರದಿ ಬಳಿಕ ಮಂಡ್ಯ ಸೆಂಟ್ರಲ್ ಠಾಣೆ ಪೊಲೀಸರು ನಕಲಿ ವೋಟರ್​ ಐಟಿ ಮಾಡಿಕೊಡುತ್ತಿದ್ದ ದಂಪತಿಯಾದ ತೌಸಿಫ್ @ ದಡಕನ್, ಪತ್ನಿ ಹೀನಾ ಕೌಸರ್ ಅವರನ್ನು ಬಂಧಿಸಿ ಡಿವೈಎಸ್​ಪಿ ಮಂಜುನಾಥ್ ನೇತೃತ್ವದಲ್ಲಿ ವಿಚಾರಣೆ ನಡೆಸಿದ್ದಾರೆ. ಬಂಧಿತರ ವಿರುದ್ಧ IPC 468, 471, 420 IT ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಲಾಗಿದೆ.

ಈ ಕುರಿತು ಮಂಗಳವಾರ 'ಈಟಿವಿ ಭಾರತ' ವಿಸ್ತೃತ ವರದಿ ಮಾಡಿತ್ತು. ಈ ವರದಿ ಓದಿ ತಕ್ಷಣ ಕ್ರಮ ಕೈಗೊಂಡಿದ್ದರಿಂದ ಮತ್ತಷ್ಟು ಜನರು ಮೋಸ ಹೋಗುವುದು ತಪ್ಪಿದಂತಾಗಿದೆ. ಅಧಿಕಾರಿಗಳಿಗೆ ಧನ್ಯವಾದ ತಿಳಿಸುತ್ತೇವೆ.

ಸಿಎಸ್​ಸಿ ಕೇಂದ್ರದ ಮೇಲೆ ದಾಳಿ

ABOUT THE AUTHOR

...view details