ಕರ್ನಾಟಕ

karnataka

ETV Bharat / state

ಈ ಪಕ್ಷದ​ ಕಾರ್ಯಾಲಯದಲ್ಲಿ ನಕಲಿ ಐಡಿ ಪಾಸ್​ಪೋರ್ಟ್ ದಂಧೆ ಆರೋಪ: ದಂಪತಿ ವಿರುದ್ಧ ದೂರು

ಮಂಡ್ಯ ನಗರದ ಹೊಳಲು ವೃತ್ತದಲ್ಲಿರುವ ಜೆಡಿಎಸ್​ ಕಾರ್ಯಾಲಯವೊಂದರಲ್ಲಿ ನಕಲಿ ಪಾಸ್​ಪೋರ್ಟ್​, ಎಲೆಕ್ಷನ್​ ಐಡಿ, ಆಧಾರ್​ಕಾರ್ಡ್​ ಮಾಡಿಕೊಡಲಾಗ್ತಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತೆಯೊಬ್ಬರು ದಂಪತಿ ವಿರುದ್ಧ ಪೊಲೀಸರಿಗೆ ಸಾಮಾಜಿಕ ಕಾರ್ಯಕರ್ತೆಯೊಬ್ಬರು ದೂರು ನೀಡಿದ್ದಾರೆ.

fake id passport printing allegations against jds office in mandya
ದಂಪತಿ ವಿರುದ್ಧ ದೂರು

By

Published : Aug 31, 2021, 4:25 PM IST

Updated : Aug 31, 2021, 9:07 PM IST

ಮಂಡ್ಯ: ನಗರದ ಹೊಳಲು ವೃತ್ತದಲ್ಲಿರುವ ಡಿ.ಕೆ.ಹೆಚ್. ಅಸೋಸಿಯೇಟ್ ಹೆಸರಿನ ಪಕ್ಷವೊಂದರ​ ಕಾರ್ಯಾಲಯದಲ್ಲಿ ನಕಲಿ ಐಡಿ ಕಾರ್ಡ್​​, ಪಾಸ್​ಪೋರ್ಟ್​ ಮಾಡಿಕೊಡಲಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತೆಯೊಬ್ಬರು ಆರೋಪಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತೆ ಸಲ್ಮಾ ಬಾನು ಆರೋಪ

ಇದು ಹೆಸರಿಗೆ ಮಾತ್ರ ಸೇವಾ ಕೇಂದ್ರವಾಗಿದ್ದು, ಕಾಸು ಕೊಟ್ಟರೆ ಇಲ್ಲಿ ಪಾಕಿಸ್ತಾನ, ತಾಲಿಬಾನಿಗಳಿಗೂ ಭಾರತೀಯ ಪೌರತ್ವ ಕೊಡುತ್ತಾರೆ ಎಂದು ಸಾಮಾಜಿಕ ಕಾರ್ಯಕರ್ತೆ ಸಲ್ಮಾ ಬಾನು ದೂರಿದ್ದು, ಈ ದಂಧೆಯ ಹಿಂದೆ ಪ್ರಮುಖ ಪಕ್ಷವೊಂದರ ಪ್ರಬಲ ನಾಯಕರು ಇದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ದೂರು

ಮಂಡ್ಯ ನಗರದ ಹೊಳಲು ವೃತ್ತದಲ್ಲಿರುವ ಈ ಸೇವಾ ಕೇಂದ್ರ ತೌಸಿಫ್ @ ದಡಕನ್, ಪತ್ನಿ ಹೀನಾ ಕೌಸರ್ ದಂಪತಿಗೆ ಸೇರಿದೆ‌. ಈ ಇಬ್ಬರು ಜೆಡಿಎಸ್ ಕಾರ್ಯಕರ್ತರಾಗಿದ್ದು, ರಹಸ್ಯ ಕ್ಯಾಮೆರಾದಲ್ಲಿ ಇವರು ನಡೆಸುತ್ತಿರುವ ನಕಲಿ ಐಡಿ ಕಾರ್ಡ್​ ದಂಧೆಯ ಕರಾಳ ಮುಖ ಸೆರೆ ಹಿಡಿಯಲಾಗಿದೆ‌. ಭೂಗತ ಪಾತಕಿಗಳಿಗೂ ಮಂಡ್ಯ ವಿಳಾಸದಲ್ಲಿ ಪಾಸ್​ಪೋರ್ಟ್​ ನೀಡುತ್ತಿದ್ದಾರೆ ಎಂದು ಸಲ್ಮಾ ಆರೋಪಿಸಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರನ್ನು ಸಹ ನೀಡಿದ್ದಾರೆ.

ಮಂಡ್ಯ ತಹಶೀಲ್ದಾರ್​ ಪ್ರತಿಕ್ರಿಯೆ:

ಮಂಡ್ಯ ತಹಶೀಲ್ದಾರ್​ ಪ್ರತಿಕ್ರಿಯೆ

''ಮಂಡ್ಯದಲ್ಲಿ ಸಿ.ಎಸ್.ಸಿ ಕೇಂದ್ರಗಳಲ್ಲಿ 180 ಸರ್ವಿಸ್‌ಗಳನ್ನ ಕೊಡಲಾಗ್ತಿದೆ. ಆದ್ರೆ ಕಳೆದ ಒಂದೂವರೆ ತಿಂಗಳಿಂದ ಓಟರ್ ಐಡಿ, ಆಧಾರ್ ಕಾರ್ಡ್ ಕೊಡೋದನ್ನ ಸರ್ಕಾರದ ವತಿಯಿಂದ ಸ್ಟಾಪ್ ಮಾಡಲಾಗಿದೆ. ಆದರೂ ಕಳೆದ ಎರಡೂ ದಿನಗಳಿಂದ DKH ಅಸೋಸಿಯೇಟ್ಸ್ ನಕಲಿ ಐಡಿ ಕಾರ್ಡ್ ನೀಡ್ತಿದ್ದಾರೆ ಎಂಬ ದೂರು ಬಂದಿದ್ದು, ತನಿಖೆ ಮಾಡಿ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಅಲ್ಲದೇ ಅವರನ್ನ ಬ್ಲಾಕ್ ಲಿಸ್ಟ್ ಗೆ ಸೇರಿಸಿ ಲೈಸೆನ್ಸ್ ರದ್ದುಪಡಿಸಲಾಗುವುದು'' ಎಂದು ಮಂಡ್ಯ ತಹಶೀಲ್ದಾರ್ ಚಂದ್ರಶೇಖರ್ ಶಂ. ಗಾಳಿ ತಿಳಿಸಿದ್ದಾರೆ.

ಇದನ್ನೂ ಓದಿ:ವಿದೇಶಿ ಅಂಚೆ ಮೂಲಕ ಅಕ್ರಮ ಜಿಂಕೆ ಚರ್ಮ ಸಾಗಣೆ: ದೇವನಹಳ್ಳಿಯಲ್ಲಿ ಪ್ರಕರಣ

Last Updated : Aug 31, 2021, 9:07 PM IST

ABOUT THE AUTHOR

...view details