ಕರ್ನಾಟಕ

karnataka

ETV Bharat / state

ಪಕ್ಷದಲ್ಲಿ ಸಿಎಂ ಬದಲಾವಣೆ ವಿಚಾರವೇ ಇಲ್ಲ: ಮಾಜಿ ಶಾಸಕ ಎ.ಮಂಜು - KRS

ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ವಿಚಾರ ಕಾವೇರಿದ್ದು, ಈ ಬಗ್ಗೆ ಅರಕಲಗೂಡು ಮಾಜಿ ಶಾಸಕ ಎ.ಮಂಜು ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

EX MLA A Manju
ಮಾಜಿ ಶಾಸಕ ಎ.ಮಂಜು

By

Published : Jul 20, 2021, 6:45 AM IST

ಮಂಡ್ಯ :ಮುಖ್ಯಮಂತ್ರಿಯಾಗಿ ಬಿ.ಎಸ್.​ ಯಡಿಯೂರಪ್ಪ ಅವರೇ ಮುಂದುವರಿಯುತ್ತಾರೆ ಎಂದು ಹೈಕಮಾಂಡ್ ಸ್ಪಷ್ಟ ಸಂದೇಶ ರವಾನಿಸಿದೆ. ಹಾಗಾಗಿ, ಪಕ್ಷದಲ್ಲಿ ಸಿಎಂ ಬದಲಾವಣೆಯ ವಿಚಾರವೇ ಇಲ್ಲ ಎಂದು ಮಾಜಿ ಶಾಸಕ ಎ.ಮಂಜು ಹೇಳಿದರು.

ಕೆಆರ್‌ಎಸ್​ ಬಳಿ ಮಾತನಾಡಿದ ಅವರು, ಯಡಿಯೂರಪ್ಪ ಹಾಲಿ ಮುಖ್ಯಮಂತ್ರಿ, ಬೇರೊಬ್ಬರ ಇಷ್ಟಕ್ಕೆ ಬದಲಾವಣೆ ಮಾಡಲು ಆಗುವುದಿಲ್ಲ. ಜು.26ಕ್ಕೆ ಸರ್ಕಾರ 2 ವರ್ಷ ಪೂರೈಸಲಿದೆ. ಅಂದು ಶಾಸಕರಿಗೆ ಔತಣಕೂಟ ಆಯೋಜಿಸಲಾಗಿದೆ ಎಂದರು.

ಮಾಜಿ ಶಾಸಕ ಎ.ಮಂಜು

ಓದಿ : ಬೆಂಬಲಿಗರ ಪಡೆಯಿಲ್ಲ, ಆಪ್ತರ ಸುಳಿವಿಲ್ಲ: ಒಬ್ಬಂಟಿಯಾಗಿ ಕಾಲ ಕಳೆದ ಸಿಎಂ!

ಬಿಜೆಪಿ ವಿರುದ್ಧ ಷಡ್ಯಂತ್ರ :ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ವೈರಲ್ ಆಡಿಯೋನಳಿನ್ ಕುಮಾರ್ಕಟೀಲ್ ಅವರದ್ದು ಎನ್ನಲು ಯಾವುದೇ ಹುರುಳಿಲ್ಲ. ಆಡಿಯೋ ಕಟ್ ಪೇಸ್ಟ್ ಆಗಿದೆ ಎಂದು ಕಟೀಲ್‌ ಅವರೇ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದರು.

ಪಕ್ಷದ ವರಿಷ್ಠರು ನಾಯಕತ್ವ ಬದಲಾವಣೆಯ ಬಗ್ಗೆ ಎಲ್ಲೂ ಹೇಳಿಲ್ಲ. ಸಿಎಂ ಬದಲಾವಣೆ ವಿಚಾರ ಪಕ್ಷದ ಮುಂದಿಲ್ಲ. ಇದು ಬಿಜೆಪಿ ವಿರುದ್ಧ ನಡೆದಿರುವ ಷಡ್ಯಂತ್ರ. ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದರು.

ABOUT THE AUTHOR

...view details