ಕರ್ನಾಟಕ

karnataka

ETV Bharat / state

ಸರ್ಕಾರವನ್ನ ನಂಬಿದ್ರೆ ನಮ್ಮೆಲ್ಲರ ತಿಥಿ ಆಗುತ್ತೆ... ಪುಟ್ಟರಾಜು ಆಕ್ರೋಶ - ಕರ್ನಾಟಕ ಲಾಕ್​ಡೌನ್

ಇನ್ನ ಆರೋಗ್ಯ ಮಂತ್ರಿ ಒಂದ್ ಹೇಳ್ತಾರೆ, ಮುಖ್ಯಮಂತ್ರಿ ಇನ್ನೊಂದ್ ಹೇಳ್ತಾರೆ ಎಂದು ಏಕವಚನದಲ್ಲೇ ಸಚಿವ, ಸಿಎಂ ವಿರುದ್ದ ಕಿಡಿಕಾರಿದರು. ಇವರಾರೂ ಸರಿಯಾದ ಮಾಹಿತಿಯನ್ನ ಜನರಿಗೆ ನೀಡುತ್ತಿಲ್ಲ. ಸರ್ಕಾರ ಹೆಚ್ಚಿನ ರೀತಿ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಶಾಸಕ ಪುಟ್ಟರಾಜು ಖಡಕ್ ಎಚ್ಚರಿಕೆ ನೀಡಿದರು.

PUTTARAJU
PUTTARAJU

By

Published : May 4, 2021, 1:24 AM IST

Updated : May 4, 2021, 3:58 AM IST

ಮಂಡ್ಯ: ಸರ್ಕಾರವನ್ನು ನಂಬಿದ್ರೆ ನಮ್ಮೆಲ್ಲರ ತಿಥಿ ಆಗುತ್ತೆ ಎಂದು ಸರ್ಕಾರದ ವಿರುದ್ಧ ಮಂಡ್ಯದಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರ ಕ್ಷೇತ್ರ ಕೆ.ಆರ್.ಪೇಟೆಗೆ ಆಕ್ಸಿಜನ್ ಇಲ್ಲ. ಇನ್ನ ಸಚಿವರು ಎಲ್ಲಿಂದ ತರುತ್ತಾರೆ? ಈ ಸರ್ಕಾರ ನಮ್ಮನ್ನ ಉಳಿಸಿಕೊಳ್ಳುತ್ತೆ ಎಂದುಕೊಂಡಿದ್ದರೆ, ನಮ್ಮೆಲ್ಲರ ತಿಥಿ ಆಗುತ್ತೆ ಬರೆದಿಟ್ಟುಕೊಳ್ಳಿ ಎಂದು ಗುಡುಗಿದರು.

ಸರ್ಕಾರ ನಂಬಿದ್ರೆ ನಮ್ಮೆಲ್ಲರ ತಿಥಿ ಆಗುತ್ತೆ... ಪುಟ್ಟರಾಜು ಆಕ್ರೋಶ
ಇನ್ನ ಆರೋಗ್ಯ ಮಂತ್ರಿ ಒಂದ್ ಹೇಳ್ತಾರೆ, ಮುಖ್ಯಮಂತ್ರಿ ಇನ್ನೊಂದ್ ಹೇಳ್ತಾರೆ ಎಂದು ಏಕವಚನದಲ್ಲೇ ಸಚಿವ, ಸಿಎಂ ವಿರುದ್ದ ಕಿಡಿಕಾರಿದರು. ಇವರಾರೂ ಸರಿಯಾದ ಮಾಹಿತಿಯನ್ನ ಜನರಿಗೆ ನೀಡುತ್ತಿಲ್ಲ. ಸರ್ಕಾರ ಹೆಚ್ಚಿನ ರೀತಿ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಶಾಸಕ ಪುಟ್ಟರಾಜು ಖಡಕ್ ಎಚ್ಚರಿಕೆ ನೀಡಿದರು.ಭಾನುವಾರ ಸಂಜೆಯೇ ಆಕ್ಸಿಜನ್ ಒದಗಿಸುವ ಭರವಸೆ ನೀಡಿದ್ರಿ. ಈಗ ಮಾತು ಕೊಟ್ಟಂತೆ ಮಾತು ಉಳಿಸಿಕೊಳ್ಳಿ. ಇಲ್ಲವಾದರೆ ಮುಂದಾಗುವ ಅನಾಹುತಕ್ಕೆ ನೀವೇ ಬೆಲೆ ತೆತ್ತಬೇಕಾಗುತ್ತೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಎಚ್ಚರಿಕೆ ನೀಡಿದರು.ಮೂರು ಜಿಲ್ಲೆ ಪರವಾಗಿ ನಾನು ಮನವಿ ಮಾಡುತ್ತೇನೆ. ಮೈಸೂರು ಜಿಲ್ಲೆಗೆ ಬೇಕಾದಷ್ಟು ಆಕ್ಸಿಜನ್ ಇಟ್ಟುಕೊಂಡು ಬಾಕಿ ಇರುವುದನ್ನ ಮಂಡ್ಯ, ಚಾಮರಾಜನಗರಕ್ಕೆ ನೀಡಿ ಎಂದು ಮೈಸೂರು ಜಿಲ್ಲಾಧಿಕಾರಿಗೆ ಪುಟ್ಟರಾಜು ಆಗ್ರಹ ಮಾಡಿದರು.ಮಂಡ್ಯ ಸಂಸದರಿಗೂ ಮನವಿ ಮಾಡಿದ ಮಾಜಿ‌ ಸಚಿವ ಸಂಸದರು, ಪ್ರಭಾವಿ ನಾಯಕರು ತಕ್ಷಣ ತಮ್ಮ ಪ್ರಭಾವ ಬಳಸಿ ಸರ್ಕಾರದಿಂದ ಆಕ್ಸಿಜನ್ ಕೊಡಿಸುವ ವ್ಯವಸ್ಥೆ ಮಾಡಲಿ ಎಂದರು. (ಚಾಮರಾಜನಗರದ ರೀತಿ ಮಂಡ್ಯದಲ್ಲಿಯೂ ನಡೆಯಬಹುದು: ಪುಟ್ಟರಾಜು)
Last Updated : May 4, 2021, 3:58 AM IST

ABOUT THE AUTHOR

...view details