ಮಂಡ್ಯ: ಕಾಡಾನೆಗಳ ಗುಂಪೊಂದು ತೆಂಗಿನ ತೋಟಕ್ಕೆ ನುಗ್ಗಿ 20ಕ್ಕೂ ಹೆಚ್ಚು ತೆಂಗಿನ ಸಸಿಗಳನ್ನ ನಾಶ ಮಾಡಿರುವ ಘಟನೆ ಮಳವಳ್ಳಿ ತಾಲೂಕಿನ ಮಲ್ಲಿಕ್ಯಾತನಹಳ್ಳಿ ಬಳಿ ನಡೆದಿದೆ.
ತೆಂಗಿನ ತೋಟಕ್ಕೆ ಕಾಡಾನೆಗಳ ದಾಳಿ.. 20ಕ್ಕೂ ಹೆಚ್ಚು ತೆಂಗಿನ ಸಸಿಗಳ ನಾಶ.. - mandya latest news
ಕಾಡಾನೆಗಳ ಗುಂಪೊಂದು ತೆಂಗಿನ ತೋಟಕ್ಕೆ ನುಗ್ಗಿ 20ಕ್ಕೂ ಹೆಚ್ಚು ತೆಂಗಿನ ಸಸಿಗಳನ್ನ ನಾಶ ಮಾಡಿರುವ ಘಟನೆ ಮಳವಳ್ಳಿ ತಾಲೂಕಿನ ಮಲ್ಲಿಕ್ಯಾತನಹಳ್ಳಿ ಬಳಿ ನಡೆದಿದೆ.
ತೆಂಗಿನ ತೋಟಕ್ಕೆ ಕಾಡಾನೆಗಳ ದಾಳಿ..20ಕ್ಕೂ ಹೆಚ್ಚು ತೆಂಗಿನ ಸಸಿಗಳ ನಾಶ
ನಿಂಗಣ್ಣ ಎಂಬುವರ ತೋಟಕ್ಕೆ ನುಸುಳಿದ 3 ಆನೆಗಳು, ತೆಂಗು ಸೇರಿದಂತೆ ವಿವಿಧ ಬೆಳೆಗಳನ್ನ ನಾಶ ಮಾಡಿವೆ. ಕಳೆದ ಒಂದು ವಾರದಿಂದ ಆನೆಗಳ ದಾಳಿ ಗ್ರಾಮದ ಸುತ್ತಮುತ್ತಲಲ್ಲಿ ನಡೆಯುತ್ತಿದ್ದು, ಅರಣ್ಯಾಧಿಕಾರಿಗಳು ಆನೆಗಳನ್ನು ಕಾಡಿಗೆ ಓಡಿಸಲು ಹರಸಾಹಸ ಪಡುತ್ತಿದ್ದಾರೆ. ಆನೆ ದಾಳಿಯಿಂದ ನಷ್ಟ ಹೊಂದಿದ ರೈತರಿಗೆ ಪರಿಹಾರ ಕೊಡುವ ಭರವಸೆಯನ್ನ ಅಧಿ ಕಾರಿಗಳು ನೀಡಿದ್ದಾರೆ.