ಸಕಲೇಶಪುರ: ತಾಲೂಕಿನ ಹಲಸುಲಿಗೆ ಗ್ರಾ.ಪಂ ವ್ಯಾಪ್ತಿಯ ಹಸಿಡೆ ಗ್ರಾಮದಲ್ಲಿ ರೈಲು ಡಿಕ್ಕಿ ಹೊಡೆದ ಪರಿಣಾಮ ಕಾಡಾನೆಯೊಂದು ಸ್ಥಳದಲ್ಲೇ ಮೃತಪಟ್ಟಿದೆ. ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಸಕಲೇಶಪುರದಲ್ಲಿ ರೈಲು ಡಿಕ್ಕಿ ಹೊಡೆದು ಕಾಡಾನೆ ಸಾವು - ಕಾಡಾನೆ ಸಾವು
ರೈಲಿಗೆ ಸಿಲುಕಿ ಕಾಡಾನೆಯೊಂದು ಮೃತಪಟ್ಟ ಘಟನೆ ಸಕಲೇಶಪುರದಲ್ಲಿ ನಡೆದಿದೆ.
ರೈಲಿಗೆ ಡಿಕ್ಕಿ ಹೊಡೆದು ಕಾಡಾನೆ ಸಾವು
ಬೆಂಗಳೂರಿನಿಂದ ಕಾರವಾರಕ್ಕೆ ಹೋಗುತ್ತಿದ್ದ ಬೆಂಗಳೂರು-ಕಾರವಾರ ಎಕ್ಸ್ಪ್ರೆಸ್ ರೈಲಿಗೆ ಆನೆ ಅಡ್ಡ ಬಂದ ಪರಿಣಾಮ ಈ ದುಘರ್ಟನೆ ನಡೆದಿದೆ ಎನ್ನಲಾಗ್ತಿದೆ. ಅರಣ್ಯ ಇಲಾಖೆ ಹಾಗೂ ಸ್ಥಳೀಯರ ಸಹಕಾರದಿಂದ ಕಾಡಾನೆ ಕಳೇಬರವನ್ನು ರೈಲು ಹಳಿಯ ಪಕ್ಕಕ್ಕೆ ಸರಿಸಲಾಯಿತು. ಇದರಿಂದ ರೈಲು ಸಂಚಾರ ಅರ್ಧ ಗಂಟೆ ವಿಳಂಬಗೊಂಡಿತ್ತು.
ಪದೇ ಪದೇ ರೈಲು ಹಳಿಯನ್ನು ದಾಟಲು ಹೋಗಿ ಕಾಡಾನೆಗಳು ಸಾವಿಗೀಡಾಗುವುದು ಸಾಮಾನ್ಯವಾಗಿದೆ. ಅರಣ್ಯ ಇಲಾಖೆ ರೈಲು ಹಳಿಗಳ ಪಕ್ಕ ಬ್ಯಾರಿಕೇಡ್ ನಿರ್ಮಾಣ ಮಾಡಲು ವಿಫಲವಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.