ಮಂಡ್ಯ:ವಿದ್ಯುತ್ ಸಮಸ್ಯೆಯಿಂದ ಮೆಮು ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾದ ಘಟನೆ ಮದ್ದೂರು ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಕೈಕೊಟ್ಟ ವಿದ್ಯುತ್: ಮದ್ದೂರಲ್ಲಿ ಕೆಲ ಹೊತ್ತು ನಿಂತ ಮೆಮು ರೈಲು... ಪ್ರಯಾಣಿಕರ ಪರದಾಟ - ವಿದ್ಯುತ್ ಸಮಸ್ಯೆ
ಮದ್ದೂರು ರೈಲ್ವೆ ನಿಲ್ದಾಣದಲ್ಲಿ ಸಿಂಗಲ್ ಫೇಸ್ ವಿದ್ಯುತ್ ಸಮಸ್ಯೆಯಿಂದಾಗಿ ರೈಲು ನಿಲ್ದಾಣದಲ್ಲಿಯೇ ಮೆಮು ರೈಲು ಕೆಲ ಹೊತ್ತು ಸ್ಥಗಿತಗೊಂಡಿತು. ಇದರಿಂದ ಪ್ರಯಾಣಿಕರು ಪರದಾಡುವಂತಾಯಿತು.

Memu train stopped in Maddur
ಮದ್ದೂರು ರೈಲ್ವೆ ನಿಲ್ದಾಣದಲ್ಲಿ ವಿದ್ಯುತ್ ಸಮಸ್ಯೆಯಿಂದಾಗಿ ಮೆಮು ರೈಲು ಸಂಚಾರದಲ್ಲಿ ವ್ಯತ್ಯಯ
ರೈಲು ಸಂಚಾರದಲ್ಲಿ ಉಂಟಾದ ಸಮಸ್ಯೆಯಿಂದ ಪ್ರಯಾಣಿಕರು ಸುಮಾರು ಒಂದು ಗಂಟೆಗೂ ಅಧಿಕ ಸಮಯ ಪರದಾಡಿದರು. ಸಿಂಗಲ್ ಫೇಸ್ ಸಮಸ್ಯೆ ಉಂಟಾಗಿ ಮದ್ದೂರು ರೈಲು ನಿಲ್ದಾಣದಲ್ಲಿಯೇ ಮೆಮು ರೈಲು ನಿಲಬೇಕಾಯಿತು. ಇದರಿಂದ ಹೈರಾಣಾದ ಪ್ರಯಾಣಿಕರು, ಈ ಬಗ್ಗೆ ಯಾವುದೇ ಮಾಹಿತಿ ನೀಡದೆ ರೈಲ್ವೆ ನಿಲ್ದಾಣದ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದರು.