ಮಂಡ್ಯ: ನಾನೊಬ್ಬ ಸ್ವಾಭಿಮಾನಿ ರಾಜಕಾರಣಿ, ಸ್ವಾರ್ಥ ರಾಜಕಾರಣಿ ನಾನಲ್ಲ. ಸಾಯುವವರೆಗೂ ಹೆಣದ ಮೇಲೆ ಫ್ಲಾಗ್ ಹಾಕುವವರಗೆ ರಾಜಕಾರಣದಲ್ಲಿರಬೇಕು ಎನ್ನುವವರ ಸಂಖ್ಯೆ ಹೆಚ್ಚಾಗ್ತಿದೆ. ನನ್ನ ಚುನಾವಣಾ ರಾಜಕೀಯ ನಿವೃತ್ತಿ ಸಯಂಪ್ರೇರಿತ ನಿರ್ಧಾರ ಯಾರ ಒತ್ತಡವು ಇಲ್ಲ ಎಂದು ಮಾಜಿ ಸಿಎಂ ಡಿ.ವಿ ಸದಾನಂದಗೌಡ ತಿಳಿಸಿದ್ದಾರೆ.
ಬರ ಅಧ್ಯಯನ ಮಾಡಲು ಮಂಡ್ಯಕ್ಕೆ ಆಗಮಿಸಿದ ವೇಳೆ ಮದ್ದೂರಿನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಮನುಷ್ಯನಿಗೆ ಕೆಲವು ಇತಿಮಿತಿ ಇರಬೇಕು. ಮೂವತ್ತು ವರ್ಷದಿಂದ ಎಲ್ಲ ಸ್ಥಾನಮಾನ ನೋಡಿದ್ದೇನೆ. ರಾಷ್ಟ್ರೀಯ ಕಾರ್ಯದರ್ಶಿ ಕೂಡ ಪಕ್ಷದಲ್ಲಿ ಆಗಿದ್ದೆ, ಕೇಂದ್ರದಲ್ಲಿ ಏಳು ವರ್ಷ ಮೋದಿ ಅವರ ಜೊತೆ ಸಚಿವನಾಗಿ ಕೆಲಸ ಮಾಡಿದ್ದೇನೆ. ಸಿಎಂ ಆಗಿದ್ದೆ, ರಾಜ್ಯಾಧ್ಯಕ್ಷ ಕೂಡ ಆಗಿದ್ದೆ ಎಂದು ಹೇಳಿದ ಅವರು ಇಂದಿನ ದಿನಗಳಲ್ಲಿ ಬಿಜೆಪಿ ದೊಡ್ಡ ಮಟ್ಟದಲ್ಲಿ ಸಂಘಟನೆ ಆಗುತ್ತಿದೆ. 40 ವರ್ಷಕ್ಕಿಂತ ಕೆಳಗಿನವರು ದೇಶದಲ್ಲಿ 60 ಪರ್ಸೆಂಟ್ ಇದ್ದಾರೆ. ನಾನು ಸಾಯುವರೆಗೂ ಮತ್ತು ನನ್ನ ಶವಕ್ಕು ಕೂಡು ಬಿಜೆಪಿ ಬಟ್ಟೆ ಹಾಕಬೇಕು ಎನ್ನುವ ಭಾವನೆಯಲ್ಲಿ ರಾಜಕೀಯ ಮಾಡುವಂತಹ ರಾಜನೀತಿಯನ್ನು ನಾನು ಒಪ್ಪಲ್ಲ ಎಂದರು.
25 ವರ್ಷದ ನಂತರ ಚುನಾವಣಾ ರಾಜಕೀಯದಿಂದ ದೂರ ಆಗಬೇಕು ಎಂದುಕೊಂಡಿದ್ದೇ. ಆದರೇ ಪಕ್ಷದ ಒತ್ತಡದ ಹಿನ್ನೆಲೆಯಲ್ಲಿ ನಾನು ಕಳೆದ ಬಾರಿ ಚುನಾವಣೆಯಲ್ಲಿ ಸ್ವರ್ಧೆ ಮಾಡಿದ್ದೆ. ನನಗೆ ಪಕ್ಷ ಎಲ್ಲವನ್ನೂ ಕೊಟ್ಟಿದೆ. ಈ ಬಾರಿ ಆರು ತಿಂಗಳ ಮುಂಚೆ ಹೇಳಿದರೆ ಹೊಸಬರನ್ನ ಹುಡುಕಲು ಅನುಕೂಲ ಆಗುತ್ತೆ ಎಂದು ನಿವೃತ್ತಿ ಬಗ್ಗೆ ತಿಳಿಸಿದ್ದೇನೆ. ಪಕ್ಷದ ಕೆಲಸ ಮಾಡಲು ಮಾತ್ರ ಅವಕಾಶ ಕೊಡಿ ಎಂದಿದ್ದೇನೆ. ರಾಜಕೀಯ ನಿವೃತ್ತಿ ಹಿಂದೆ ಯಾರ ಒತ್ತಡವೂ ಇಲ್ಲ ಎಂದು ಸ್ಪಷ್ಟನೆ ನೀಡಿದರು.