ಮಂಡ್ಯ:ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (ಮನ್‌ಮುಲ್) ಚುನಾವಣೆ ಕುತೂಹಲ ಕೆರಳಿಸಿದೆ. 12 ನಿರ್ದೇಶಕ ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆಯಲಿದ್ದು, 1081 ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಲಿದ್ದಾರೆ.
ನಾಳೆ ಮನ್‌ಮುಲ್ ನಿರ್ದೇಶಕ ಸ್ಥಾನಕ್ಕೆ ಚುನಾವಣೆ - ಸುಮಲತಾ
ಮಂಡ್ಯ ಹಾಲು ಒಕ್ಕೂಟದ ಚುನಾವಣೆ ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರಿಗೆ ಪ್ರತಿಷ್ಠೆಯಾಗಿದೆ. ಇದರ ಜೊತೆಗೆ ಸಂಸದೆ ಸುಮಲತಾ ಅಂಬರೀಶ್ ಬೆಂಬಲಿಗರು ಸ್ಪರ್ಧೆ ಮಾಡಿದ್ದು, ತ್ರಿಕೋನ ಸ್ಪರ್ಧೆ ಎದುರಾಗಿದೆ.
ನಾಳೆ ಮನ್‌ಮುಲ್ ನಿರ್ದೇಶಕ ಸ್ಥಾನಕ್ಕೆ ಚುನಾವಣೆ
ಆಡಳಿತ ಮಂಡಳಿಯ 12 ಸ್ಥಾನಗಳಿಗೆ 25 ಮಂದಿ ನಾಮಪತ್ರ ಸಲ್ಲಿಸಿದ್ದು, ಮಂಡ್ಯ ಕ್ಷೇತ್ರದಿಂದ 5, ಮಳವಳ್ಳಿಯಿಂದ 3, ಪಾಂಡವಪುರ 2, ಶ್ರೀರಂಗಪಟ್ಟಣ 2, ಕೆ.ಆರ್.ಪೇಟೆ 5, ನಾಗಮಂಗಲ 4 ಹಾಗೂ ಮದ್ದೂರು ತಾಲೂಕಿನಿಂದ 4 ಮಂದಿ ಸ್ಪರ್ಧಿಸಿದ್ದಾರೆ.
ಮನ್‌ಮುಲ್ ಅಧಿಕಾರಕ್ಕಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಹೋರಾಟ ಶುರುವಾಗಿದೆ. ಬಿಜೆಪಿಯಿಂದ ಕೇವಲ ಮೂವರು ಸ್ಪರ್ಧೆ ಮಾಡಿದ್ದಾರೆ. ಇನ್ನುಳಿದಂತೆ ಸುಮಲತಾ ಬೆಂಬಲಿಗರು ಕಣದಲ್ಲಿ ಇರುವುದು ಕುತೂಹಲ ಮೂಡಿಸಿದೆ.