ಮಂಡ್ಯ:ಸಿಎಂ ಕುಮಾರಸ್ವಾಮಿ ಹೇಳಿಕೆ ಕುರಿತು ಚುನಾವಣಾ ಆಯೋಗಕ್ಕೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ 24 ಗಂಟೆಗಳಲ್ಲಿ ವರದಿ ನೀಡುವಂತೆ ಚುನಾವಣಾಧಿಕಾರಿ ಹಾಗೂ ಡಿಐಜಿಗೆ ಸೂಚನೆ ನೀಡಿದೆ.
ಸಿಎಂ ಹೇಳಿಕೆ ವಿಚಾರ... ವರದಿ ನೀಡುವಂತೆ ಡಿಐಜಿಗೆ ಚುನಾವಣಾ ಆಯೋಗ ಸೂಚನೆ - undefined
ಮಾಧ್ಯಮಗಳ ಮೇಲೆ ಹಲ್ಲೆ ನಡೆದರೆ ನಾನು ಜವಾಬ್ದಾರನಲ್ಲ ಎಂದು ಸಿಎಂ ಕುಮಾರಸ್ವಾಮಿ ನೀಡಿದ ಹೇಳಿಕೆ ವಿಚಾರವಾಗಿ 24 ಗಂಟೆಗಳಲ್ಲಿ ವರದಿ ನೀಡುವಂತೆ ಚುನಾವಣಾಧಿಕಾರಿ ಹಾಗೂ ಡಿಐಜಿಗೆ ಚುನಾವಣಾ ಆಯೋಗ ಸೂಚನೆ ನೀಡಿದೆ.
![ಸಿಎಂ ಹೇಳಿಕೆ ವಿಚಾರ... ವರದಿ ನೀಡುವಂತೆ ಡಿಐಜಿಗೆ ಚುನಾವಣಾ ಆಯೋಗ ಸೂಚನೆ](https://etvbharatimages.akamaized.net/etvbharat/images/768-512-3013928-thumbnail-3x2-mng.jpg)
ಸಿಎಂ ಹೇಳಿಕೆ
ಏಪ್ರಿಲ್ 10ರಂದು ಸಿಎಂ ಹೆಚ್. ಡಿ. ಕುಮಾರಸ್ವಾಮಿ ಕೆಆರ್ಎಸ್ನಲ್ಲಿ ನಿಖಿಲ್ ಪರ ರೋಡ್ ಶೋ ನಡೆಸಿದ್ದರು. ಈ ಸಂದರ್ಭದಲ್ಲಿ ಮಾಧ್ಯಮಗಳ ಮೇಲೆ ಹಲ್ಲೆ ನಡೆದರೆ ನಾನು ಜವಾಬ್ದಾರನಲ್ಲ ಎಂದು ಹೇಳಿಕೆ ನೀಡಿದ್ದರು. ಹೀಗಾಗಿ ಸಾಮಾಜಿಕ ಕಾರ್ಯಕರ್ತ ಟಿ. ಜೆ. ಅಬ್ರಾಹಂ, ಸಿಎಂ ಹೇಳಿಕೆ ಕುರಿತು ರಾಜ್ಯ ಚುನಾವಣಾ ಆಯೋಗಕ್ಕೆ ಏಪ್ರಿಲ್ 13ರಂದು ದೂರು ನೀಡಿದ್ದರು.
ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಡಿಐಜಿಗೆ ಪ್ರಕರಣ ಕುರಿತು ವರದಿ ನೀಡುವಂತೆ ಚುನಾವಣಾ ಆಯೋಗ ಸೂಚಿಸಿದೆ.