ಮಂಡ್ಯ: ಕೊರೊನಾ ಬಂದೋಬಸ್ತ್‌ಗಾಗಿ ಮಹಿಳಾ ಡಿವೈಎಸ್‌ಪಿ ಮದುವೆ ಮುಂದೂಡಿ ಮಾದರಿಯಾಗಿದ್ದಾರೆ.
ಕೊರೊನಾ ಕರ್ತವ್ಯಕ್ಕಾಗಿ ಮದುವೆ ಮುಂದೂಡಿದ ಮಹಿಳಾ ಡಿವೈಎಸ್‌ಪಿ... ಸಂಸದರಿಂದ ಮೆಚ್ಚುಗೆ - ಮಂಡ್ಯ ಸುದ್ದಿ
ಮಂಡ್ಯ ಜಿಲ್ಲೆಯ ಮಳವಳ್ಳಿ ಉಪವಿಭಾಗದ ಡಿವೈಎಸ್‌ಪಿ ಪೃಥ್ವಿ ಅವರು ಕೊರೊನಾ ಕರ್ತವ್ಯಕ್ಕಾಗಿ ಏಪ್ರಿಲ್ 5ರಂದು ನಡೆಯಬೇಕಿದ್ದ ಮದುವೆ ಮುಂದೂಡಲಿದ್ದಾರೆ.
ಕೊರೊನಾ ಕರ್ತವ್ಯಕ್ಕಾಗಿ ಮದುವೆ ಮುಂದೂಡಿದ ಮಹಿಳಾ ಡಿವೈಎಸ್‌ಪಿ..ಸಂಸದರಿಂದ ಮೆಚ್ಚುಗೆ
ಏಪ್ರಿಲ್ 5 ರಂದು ಮಳವಳ್ಳಿ ಉಪವಿಭಾಗದ ಡಿವೈಎಸ್‌ಪಿ ಪೃಥ್ವಿ ಅವರ ಮದುವೆ ನಡೆಯಬೇಕಾಗಿತ್ತು. ಮಳವಳ್ಳಿಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರು ಹೆಚ್ಚಾಗುತ್ತಿದ್ದಾರೆ. ಹೀಗಾಗಿ ಕರ್ತವ್ಯ ನಿರ್ವಹಣೆಗಾಗಿ ಈ ಮಹಿಳಾ ಅಧಿಕಾರಿ ಮದುವೆ ಮುಂದೂಡಿದ್ದಾರೆ.
ಇನ್ನು,ಅಧಿಕಾರಿಯ ಕರ್ತವ್ಯ ಪ್ರಜ್ಞೆಗೆ ಸಂಸದೆ ಸುಮಲತಾ ಅಂಬರೀಶ್ , ಡಿವೈಎಸ್‌ಪಿ ಪೃಥ್ವಿ ಲಾಕ್‌ಡೌನ್‌ನಿಂದ ಮದುವೆ ಮುಂದೂಡಿ, ಇತರರಿಗೆ ಮಾದರಿಯಾಗಿದ್ದಾರೆ. ಅಲ್ಲದೇ, ದಕ್ಷವಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.