ಕರ್ನಾಟಕ

karnataka

ETV Bharat / state

ಮೀನಿನಂತೆ ಈಜಾಡಿ, ರಿವರ್ ರಾಫ್ಟಿಂಗ್​​​​​ ಮಾಡಿ... ಹಾಗಿದ್ರೆ ಕೂಡಲೇ ಇಲ್ಲಿಗೆ ಭೇಟಿ ಕೊಡಿ! - ಸಾಹಸ ಕ್ರೀಡೆ

ಪ್ರವಾಸಿಗರನ್ನು ಸೆಳೆಯಲು ದಸರಾ ಪ್ರಯುಕ್ತ ಕಾವೇರಿ ನದಿಯಲ್ಲಿ ಈಜಲು ಮತ್ತು ರಿವರ್ ರಾಫ್ಟಿಂಗ್​​ಗೆ ಪ್ರವಾಸೋದ್ಯಮ ಇಲಾಖೆ ಅವಕಾಶ ನೀಡಿದೆ.

dussere-festival-in-shrirangapattana

By

Published : Oct 3, 2019, 4:35 PM IST

ಮಂಡ್ಯ:ಕಾವೇರಿ ನದಿಯಲ್ಲಿ ಮೀನಿನಂತೆ ಈಜಬೇಕೆ, ರಿವರ್ ರಾಫ್ಟಿಂಗ್​ ಹೋಗಬೇಕೆ? ಮತ್ತೇಕೆ ತಡ. ಶ್ರೀರಂಗಪಟ್ಟಣದ ದಸರಾಗೆ ಬನ್ನಿ. ದಸರಾ ಪ್ರಯುಕ್ತ ಪ್ರವಾಸೋದ್ಯಮ ಇಲಾಖೆ ನಿಮಗಾಗಿ ಸುವರ್ಣಾವಕಾಶ ಕೊಟ್ಟಿದೆ.

ಕಾವೇರಿ ನದಿಯಲ್ಲಿ 4 ಕಿಲೋ ಮೀಟರ್ ರಾಫ್ಟಿಂಗ್​​​ ಹೋಗುವ ಅವಕಾಶ ಸಿಕ್ಕಿದೆ. ಇದಕ್ಕಾಗಿ ಮಡಿಕೇರಿ, ಚಿಕ್ಕಮಗಳೂರ ಕಡೆಗೆ ವಾಲುತ್ತಿದ್ದ ಪ್ರವಾಸಿಗರು ಈಗ ಕಾವೆರಿ ನದಿಯತ್ತ ದೃಷ್ಟಿ ನೆಟ್ಟಿದ್ದಾರೆ. ಅಕ್ಟೋಬರ್‌ 8ರವರೆಗೆ ಈ ಅವಕಾಶ ನೀಡಲಾಗಿದ್ದು, ಯುವ ಜನತೆ ಸಂಭ್ರಮದಲ್ಲಿ ಮಿಂದೇಳುತ್ತಿದ್ದಾರೆ. ರಾಫ್ಟಿಂಗ್​​ಗೆ ಫಿದಾ ಆಗಿರುವ ಯುವಕರು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ.

ರಿವರ್ ರಾಫ್ಟಿಂಗ್​​
ಸಾಹಸ ಕ್ರೀಡೆಗಾಗಿ ಇಲಾಖೆ ಎಲ್ಲಾ ರೀತಿಯ ಸಿದ್ಧತೆ ನಡೆಸಿದೆ. ಅಲ್ಲದೆ, ಮಡಿಕೇರಿಯಲ್ಲಿದ್ದ ತಂಡ ಕಾವೇರಿ ನದಿಯಲ್ಲಿ ಬೀಡು ಬಿಟ್ಟಿದೆ. ಶ್ರೀರಂಗಪಟ್ಟಣದ ಕೃಷ್ಣಮೂರ್ತಿ ಬಂಗಲೆ ಸಮೀಪದ ಕಾವೇರಿ ನದಿ ತೀರದಲ್ಲಿ ಈ ರಾಫ್ಟಿಂಗ್​​ ಇದ್ದು, ಜಲಕ್ರೀಡೆ ಬಗ್ಗೆ ಆಸಕ್ತಿ ಇರುವವರು ಭಾಗವಹಿಸಬಹುದು. ಅಲ್ಲದೆ, ಹಬ್ಬದ ಪ್ರಯುಕ್ತ ಪ್ರವಾಸಿಗರಿಗೆ ಕಡಿಮೆ ದರ ವಿಧಿಸಲಾಗಿದೆ.

ABOUT THE AUTHOR

...view details