ಮಂಡ್ಯ :ಸಚಿವ ಸಿ ಎಸ್ ಪುಟ್ಟರಾಜು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ. ರಾಜಕೀಯ ನಿವೃತ್ತಿ ಪಡೆದೇ ಪಡೆಯುತ್ತಾರೆ ಎಂದು ಕಾಂಗ್ರೆಸ್ ಮುಖಂಡ ಡಾ. ರವೀಂದ್ರ ಹೇಳಿದ್ದಾರೆ.
ಸಚಿವ ಪುಟ್ಟರಾಜು ನುಡಿದಂತೆ ನಡೆದು ರಾಜೀನಾಮೆ ಕೊಡ್ತಾರೆ, ಅವರ ವ್ಯಕ್ತಿತ್ವ ಹಾಗಿದೆ- ಡಾ.ರವೀಂದ್ರ - undefined
ಸಚಿವ ಪುಟ್ಟರಾಜು ಕೊಟ್ಟ ಮಾತಿಗೆ ತಪ್ಪೋರಲ್ಲ. ಅವರು ನುಡಿದಂತೆ ನಡೆಯುವ ವ್ಯಕ್ತಿ ಎಂದು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಮುಖಂಡ ಡಾ. ರವೀಂದ್ರ.
ನಿಖಿಲ್ ಎರಡೂವರೆ ಲಕ್ಷದಿಂದ ಗೆಲುವು ಸಾಧಿಸದೇ ಇದ್ದರೆ ರಾಜಕೀಯ ನಿವೃತ್ತಿ ಪಡೆಯೋದಾಗಿ ಸಚಿವ ಪುಟ್ಟರಾಜು ಹೇಳಿದ್ದರು. ಅದರಂತೆ ನಡೆದುಕೊಳ್ಳುತ್ತಾರೆ. ನಾನು ರಾಜೀನಾಮೆ ಕೇಳುತ್ತಿಲ್ಲ. ಅವರನ್ನು ನಾನು ಚಿಕ್ಕಂದಿನಿಂದಲೂ ನೋಡಿದ್ದೇನೆ. ಮಾತಿಗೆ ತಪ್ಪುವುದಿಲ್ಲ. ಹೀಗಾಗಿ ರಾಜಕೀಯ ನಿವೃತ್ತಿ ಪಡೆಯುತ್ತಾರೆ ಎಂದು ಡಾ. ರವೀಂದ್ರ ಹೇಳಿದ್ದಾರೆ.
ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ನೂತನ ಸಂಸದೆ ಸುಮಲತಾ ಅಂಬರೀಶ್‌ಗೆ ಸಲಹೆ, ಸಹಕಾರ ನೀಡಲಾಗುವುದು. ಎಲ್ಲಾ ಗ್ರಾಮಗಳಲ್ಲೂ ಮಾಹಿತಿ ಸಂಗ್ರಹಿಸಿ ಮಾಹಿತಿ ನೀಡಲಾಗುವುದು. ಮೂಲ ಸೌಕರ್ಯಗಳ ಬಗ್ಗೆ ಎಚ್ಚರಿಕೆ ವಹಿಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ಡಾ. ರವೀಂದ್ರ ಮಾಧ್ಯಮಗಳಿಗೆ ತಿಳಿಸಿದ್ದಾರೆ.