ಕರ್ನಾಟಕ

karnataka

ETV Bharat / state

ಕೆ.ಎಂ.ದೊಡ್ಡಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಡಾ.ಜಿ. ಮಾದೇಗೌಡ ಶಿಫ್ಟ್ - ಡಾ.ಜಿ.ಮಾದೇಗೌಡ ಮಂಡ್ಯಕ್ಕೆ ಸ್ಥಳಾಂತರ

ಅನಾರೋಗ್ಯಕ್ಕೆ ಒಳಗಾಗಿರುವ ಮಾಜಿ ಸಂಸದ ಡಾ.ಜಿ.ಮಾದೇಗೌಡರನ್ನು ಬೆಂಗಳೂರಿನ ಆಸ್ಪತ್ರೆಯಿಂದ ಮಂಡ್ಯಕ್ಕೆ ಸ್ಥಳಾಂತರಿಸಲಾಗಿದೆ.

Madegowda Shifted to KM Doddi Hosipital
ಡಾ.ಜಿ.ಮಾದೇಗೌಡ ಮಂಡ್ಯಕ್ಕೆ ಸ್ಥಳಾಂತರ

By

Published : Jul 6, 2021, 11:49 AM IST

ಮಂಡ್ಯ :ಶ್ವಾಸಕೋಶದ ಸೋಂಕಿಗೆ ಒಳಗಾಗಿ ಬೆಂಗಳೂರಿನ ವಿಕ್ರಂ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಸಂಸದ ಡಾ. ಜಿ.ಮಾದೇಗೌಡ ಅವರನ್ನು ಕೆ.ಎಂ. ದೊಡ್ಡಿಯ ಜಿ. ಮಾದೇಗೌಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.

ಸದ್ಯ, ಮಾದೇಗೌಡರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ಆಸ್ಪತ್ರೆಯ ಜನರಲ್ ಫಿಜಿಷಿಯನ್ ಡಾ.ರಕ್ಷಿತ್ ಆರ್. ಭಾರದ್ವಾಜ್ ತಿಳಿಸಿದ್ದಾರೆ.

ಓದಿ : ಹಿರಿಯ ರಾಜಕೀಯ ಮುತ್ಸದ್ದಿ ಮಂಡ್ಯದ ಜಿ.ಮಾದೇಗೌಡರ ಆರೋಗ್ಯದಲ್ಲಿ ಏರುಪೇರು

ಅಲ್ಲದೇ ಈ ಪರಿಸ್ಥಿತಿಯಲ್ಲಿ ಮಾದೇಗೌಡರಿಗೆ ನೀರಿನಾಂಶ ಮತ್ತು ಪ್ರೋಟೀನ್‌ಯುಕ್ತ ಮೊಟ್ಟೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ ಎಂದು ಪುತ್ರ ಮಧು ಡಾ.ಜಿ. ಮಾದೇಗೌಡ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details