ಕರ್ನಾಟಕ

karnataka

ETV Bharat / state

ವೈದ್ಯಕೀಯ ಕಾಲೇಜಿಗೆ ದೇಹದಾನ ಮಾಡಿದ ಪ್ರಗತಿಪರ ಚಿಂತಕರು!

ಮನುಷ್ಯ ಸತ್ತ ಮೇಲೆ ದೇಹ ಮಣ್ಣು ಮಾಡಿದರೆ ಏನು ಪ್ರಯೋಜನ. ಅದರ ಬದಲಾಗಿ ದೇಹದಾನ ಮಾಡಿದರೆ ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಸಹಕಾರಿಯಾಗುತ್ತದೆ ಎಂಬ ಕಾರಣಕ್ಕೆ 8 ಮಂದಿ ಪ್ರಗತಿಪರ ಚಿಂತಕರು ತಮ್ಮ ದೇಹವನ್ನು ಖಾಸಗಿ ವೈದ್ಯಕೀಯ ಕಾಲೇಜಿಗೆ ದಾನ ನೀಡಿದ್ದಾರೆ.

ದೇಹದಾನ ಮಾಡಿದ ದಾನಿಗಳು

By

Published : Sep 12, 2019, 7:25 PM IST

ಮಂಡ್ಯ:ದೇಹದಾನ ಮಹಾದಾನ, ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಸಹಕಾರಿ. ಈ ನಿಟ್ಟಿನಲ್ಲಿ 8 ಮಂದಿ ಪ್ರಗತಿಪರ ಚಿಂತಕರು ತಮ್ಮ ದೇಹವನ್ನು ಖಾಸಗಿ ವೈದ್ಯಕೀಯ ಕಾಲೇಜಿಗೆ ದಾನ ಮಾಡಿದ್ದಾರೆ.

ಕೆ.ಆರ್.ಪೇಟೆ ತಾಲೂಕಿನವರಾದ ಬೆಳತ್ತೂರು ನಾಗರಾಜೇಗೌಡ, ನಾಗರಾಜು, ಪತ್ರಕರ್ತ ಕೆ.ಆರ್.ನೀಲಕಂಠ, ಬಿ.ನಂಜಪ್ಪ, ಎಂ.ಬಿ. ಚಂದ್ರಶೇಖರ್, ವಿಶ‍್ರಾಂತ ಕೃಷಿ ಅಧಿಕಾರಿ ನಾಗರಾಜೇಗೌಡ, ಸಿಂಕ ಸುರೇಶ್, ಬಳ್ಳೇಕೆರೆ ಮಂಜುನಾಥ್ ನಾಗಮಂಗಲ ತಾಲೂಕಿನ ಆದಿ ಚುಂಚನಗಿರಿ ವೈದ್ಯಕೀಯ ಮಹಾ ವಿದ್ಯಾಲಯಕ್ಕೆ ದೇಹದಾನ ಮಾಡಿದ್ದಾರೆ.

ದೇಹದಾನ ಮಾಡಿದ ದಾನಿಗಳು

ಮರಣ ನಂತರ ದೇಹ ವೈದ್ಯಕೀಯ ವಿದ್ಯಾರ್ಥಿಗಳಿಗೆ ಉಪಯೋಗಕ್ಕೆ ಬರಲಿ. ಮಣ್ಣಾದರೆ ಏನು ಪ್ರಯೋಜನ?, ದೇಹ ಅಧ್ಯಯನದ ಮೂಲಕ ಇತರರ ಸಹಾಯಕ್ಕೆ ಸಹಕಾರಿ ಆಗಲಿ ಎಂದು 8 ಮಂದಿ ತಮ್ಮ ದೇಹವನ್ನು ದಾನ ಮಾಡಿದ್ದಾರೆ.

ದೇಹ ದಾನ ಮಾಡಿದ ಎಲ್ಲರನ್ನೂ ಆದಿ ಚುಂಚನಗಿರಿ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಕೆ.ಆರ್.ಪೇಟೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಭಿನಂದನೆ ಸಲ್ಲಿಸಿ, ದೇಹದಾನ ಮಾಡಿದವರು ಇತರರಿಗೆ ಮಾದರಿಯಾಗಲಿ ಎಂದು ಶುಭ ಹಾರೈಸಲಾಯಿತು.

ABOUT THE AUTHOR

...view details