ಕರ್ನಾಟಕ

karnataka

ETV Bharat / state

ಡಿಕೆಶಿ ಬಿಡುಗಡೆ ಹಿನ್ನೆಲೆ ಆಡು ಬಲಿ.. ಹರಕೆ ತೀರಿಸಿದ ಬಂಡೆ ಫ್ಯಾನ್ಸ್‌.. - ಹರಕೆ ತೀರಿಸಿದ ಅಭಿಮಾನಿಗಳು

ಮಾಜಿ ಸಚಿವ ಡಿ ಕೆ ಶಿವಕುಮಾರ್ ಅವರು ತಿಹಾರ್ ಜೈಲಿನಿಂದ ಬಿಡುಗಡೆಯಾದ ಹಿನ್ನೆಲೆ ಅಭಿಮಾನಿಗಳು ಆಡನ್ನು ಬಲಿ ಕೊಟ್ಟು ಹರಕೆ ತೀರಿಸಿದರು.

dkshivakumar-fans-celebrate

By

Published : Oct 27, 2019, 10:32 PM IST

ಮಂಡ್ಯ:ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ತಿಹಾರ್ ಜೈಲಿನಿಂದ ಬಿಡುಗಡೆ ಹಿನ್ನೆಲೆ ಅಭಿಮಾನಿಗಳು ಆಡನ್ನು ಬಲಿ ಕೊಟ್ಟು ಹರಕೆ ತೀರಿಸಿದರು.

ಕೆ.ಆರ್. ಪೇಟೆ ತಾಲೂಕಿನ ಸಂತೆಬಾಚಹಳ್ಳಿ ಹೋಬಳಿಯ ಗವಿರಂಗನಾಥ ದೇವಸ್ಥಾನದಲ್ಲಿ ಬಲಿ ಕೊಟ್ಟರು.

ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ ಅಭಿಮಾನಿಗಳು..

ಈ ವೇಳೆ ದರ್ಶನಕ್ಕೆ ಬಂದ ಭಕ್ತರಿಗೆ ಅನ್ನದಾನ ಮಾಡಲಾಯಿತು. ಮುಂದೆ ಮತ್ತೆ ಸಂಕಷ್ಟ ಬರದಿರಲಿ ಎಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಗವಿ ರಂಗಪ್ಪ ದೇವರಿಗೆ ಹರಕೆ ಕಟ್ಟಿಕೊಂಡರೆ ಇಷ್ಟಾರ್ಥ ಸಿದ್ಧಿಸುತ್ತೆ ಎಂಬ ಪ್ರತೀತಿ ಇದೆ. ಹೀಗಾಗಿ ಅಭಿಮಾನಿಗಳು ಹರಕೆ ಕಟ್ಟಿಕೊಂಡಿದ್ದರು. ಈಗ ತಮ್ಮ ಇಷ್ಟಾರ್ಥ ಸಿದ್ಧಿ ಆಗಿರೋ ಹಿನ್ನೆಲೆಯಲ್ಲಿ ಹರಕೆ ತೀರಿಸಿದ್ದಾರೆ ಡಿಕೆಶಿ ಅಭಿಮಾನಿಗಳು.

ABOUT THE AUTHOR

...view details