ಮಂಡ್ಯ:ಈಶ್ವರಪ್ಪನ ಸುದ್ದಿ ನಾನ್ ಯಾಕೆ ಮಾತನಾಡಲಿ? ಎಂದು'ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಸಹಾಯಕರಾಗಿದ್ದಾರೆ' ಎಂಬ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿಕೆ ವಿಚಾರಕ್ಕೆ ಡಿಕೆಶಿ ತಿರುಗೇಟು ನೀಡಿದರು. ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಈಶ್ವರಪ್ಪ ಅವನ ಪಾರ್ಟಿ, ಗವರ್ನರ್ ಲೆಟರ್, ಅವನ ಪರಿಸ್ಥಿತಿ ವ್ಯಾಖ್ಯಾನ ಮಾಡಿಕೊಂಡ್ರೆ ಸಾಕು. ನನ್ನ ಸುದ್ದಿ ಯಾಕೆ ಪಾಪ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ರಾಮ ಜನ್ಮಭೂಮಿ ಅವ್ಯವಹಾರ ಆರೋಪ:
ರಾಮ ಜನ್ಮಭೂಮಿ ಅವ್ಯವಹಾರ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದು ದೇಶಕ್ಕೆ ದೊಡ್ಡ ಅವಮಾನ. ನಮ್ಮ ಸಂಸ್ಕೃತಿಗೆ ದೊಡ್ಡ ಅಪಮಾನ ಎಂದರು. ನಮ್ಮ ಧರ್ಮ, ದೇವಸ್ಥಾನಕ್ಕೆ ಸಹಾಯವಾಗಬೇಕು ಅಂತಾ ಹಳ್ಳಿ- ಹಳ್ಳಿಯಿಂದ ಜನ ಹಣ ನೀಡಿದ್ದಾರೆ. ಜಮೀನು ಖರೀದಿ ಮಾಡಿ ಬ್ಯುಸಿನೆಸ್ ಮಾಡ್ಲಿ ಅಂತ ದುಡ್ಡು ನೀಡ್ಲಿಲ್ಲ. ಇಡೀ ಆಡಳಿತವನ್ನೇ ಖಂಡಿಸಬೇಕಿದೆ ಎಂದು ಆಗ್ರಹಿಸಿದರು. ಜನರು ನೀಡಿರುವ ಹಣವನ್ನು ವಾಪಸ್ ನೀಡಬೇಕು. ಅವ್ಯವಹಾರದಲ್ಲಿ ಭಾಗಿಯಾಗಿರುವವರನ್ನು ಕೇಂದ್ರ ಹಾಗೂ ಯೋಗಿ ಸರ್ಕಾರ ಬಂಧಿಸಬೇಕು ಎಂದು ಒತ್ತಾಯ ಮಾಡಿದರು.