ಕರ್ನಾಟಕ

karnataka

ETV Bharat / state

ಪಕ್ಷದ ಅಧ್ಯಕ್ಷನಾಗಿ ಬೇಲ್​ಗೆ ಅರ್ಜಿ ಹಾಕಿದೆ,ಆದ್ರೆ ಸಿಕ್ಕಿಲ್ಲಾ: ಡಿ.ಕೆ. ಶಿವಕುಮಾರ್​ - Former Minister Vinay Kulkarni

ಮಾಜಿ ಸಚಿವ ವಿನಯ್ ಕುಲಕರ್ಣಿ ಪರವಾಗಿ ಬೇಲ್​ ಅರ್ಜಿ ಹಾಕಿದ್ದೆ, ಆದರೆ ಬೇಲ್​ ಸಿಕ್ಕಿಲ್ಲ. ಪಕ್ಷದ ಅಧ್ಯಕ್ಷನಾಗಿ ನನ್ನ ಕರ್ತವ್ಯ ನಾನು ಮಾಡಿದ್ದೇನೆ ಎಂದು ಮಂಡ್ಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

KPCC President D.K. Shivakumar
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

By

Published : Jun 3, 2021, 7:41 PM IST

ಮಂಡ್ಯ: ನಾನು ಪಕ್ಷದ ಅಧ್ಯಕ್ಷ. ಬೇಲ್​ಗೆ ಅರ್ಜಿ ಹಾಕಿದೆ, ಆದ್ರೆ ಬೇಲ್ ಸಿಕ್ಕಿಲ್ಲ. ನಾನು ಹೋಗಿ ಮಾನಸಿಕವಾಗಿ ಧೈರ್ಯ ಹೇಳ ಬೇಕಾಗಿರುವುದು ನನ್ನ ಕರ್ತವ್ಯ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಭೇಟಿಗಾಗಿ, ಕೋರ್ಟ್​ಗೆ ಅರ್ಜಿ ಹಾಕಿರುವ ವಿಚಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ನಗರದಲ್ಲಿ ಮಾತನಾಡಿದ ಅವರು, ವಿನಯ್ ಕುಲಕರ್ಣಿ ಸಮಾಜದಲ್ಲಿ ದೊಡ್ಡ ನಾಯಕರು, ಅವರ ಭೇಟಿಗೆ ಕೋರ್ಟ್​ಗೆ ಮನವಿ ಮಾಡಿದ್ದೆ. ಸೂಪರ್ ಡೆಂಟ್​ಗೆ ಕರೆ ಮಾಡಿದ್ದೆ. ಕೋರ್ಟ್​ನಿಂದ ಅನುಮತಿ ಬೇಕು. ಅದಕ್ಕಾಗಿ ಅರ್ಜಿ ಹಾಕಿದ್ದೇನೆ ಎಂದರು.

ಈ ಸಮಯದಲ್ಲಿ ರಾಜಕಾರಣ ಮಾತನಾಡುವುದು ಬೇಡ, ನಾವು ಕೂಡ ಕಾಂಗ್ರೆಸ್‌ ವತಿಯಿಂದ ಜನರ ಸೇವೆಗೆ ಸದಾ ಸಿದ್ದರಿದ್ದೇವೆ. ಯಾರಿಗೂ ತೊಂದರೆಯಾಗದಂತೆ ಜನರನ್ನ ಕಾಪಡುತ್ತೇವೆ. ಕೋವಿಡ್ ನಿಯಮ ಅನುಸರಿಸಿ ಪ್ರತಿ ಮನೆ ಬಾಗಿಲಿಗೆ ಖುದ್ದಾಗಿ ಆಹಾರ ಸಾಮಗ್ರಿ ತಲುಪಿಸಿದ್ದೇವೆ ಎಂದು ತಿಳಿಸಿದರು.

ಕಾಂಗ್ರೆಸ್​ನಿಂದ ಫುಡ್ ಕಿಟ್ ವಿತರಣೆ: ಇದಕ್ಕೂ ಕೋವಿಡ್ ವಾರಿಯರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆರು, ಪೌರಕಾರ್ಮಿಕರಿಗೆ ಹಾಗೂ ಬಡ ಕುಟುಂಬದವರಿಗೆ ಕಾಂಗ್ರೆಸ್ ಸಮಿತಿ ವತಿಯಿಂದ ಫುಡ್ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ‌‌. ಶಿವಕುಮಾರ್ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಾಲನಂದ ಸ್ವಾಮೀಜಿ ಹಾಜರಿದ್ದರು.

ಕುಳ್ಳಿ ಜಯಾ ಎಂದೇ ಖ್ಯಾತರಾಗಿದ್ದ ಹಿರಿಯ ನಟಿ ಇನ್ನಿಲ್ಲ..

ABOUT THE AUTHOR

...view details