ಕರ್ನಾಟಕ

karnataka

ETV Bharat / state

ನಿಖಿಲ್​​​ ಕುಮಾರಸ್ವಾಮಿ ಪರ ಟ್ರಬಲ್​​ ಶೂಟರ್​​ ಭರ್ಜರಿ ಪ್ರಚಾರ - Mandya_election

ನಾನು ನನ್ನ ಎಲ್ಲಾ ಕಾಂಗ್ರೆಸ್ಸಿಗರಿಗೆ ಕೈ ಮುಗಿದು, ಕಾಲು ಮುಗಿದು ಕೇಳಿಕೊಳ್ತೀನಿ. ತಪ್ಪು ಮಾಡಲು ಹೋಗಬೇಡಿ. ಈ ರಾಜ್ಯದ ಮುಖ್ಯಮಂತ್ರಿ ನಿಮ್ಮ ಮನೆ ಬಾಗಿಲಿಗೆ ಬಂದು ವೋಟ್ ಕೇಳುತ್ತಿದ್ದಾರೆ. ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಡಿಕೆಶಿ ಮನವಿ ಮಾಡಿದರು.

ಡಿ.ಕೆ. ಶಿವಕುಮಾರ್

By

Published : Apr 11, 2019, 11:22 PM IST

ಮಂಡ್ಯ: ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಫೀಲ್ಡಿಗಿಳಿದಿದ್ದಾರೆ.

ಸಂಜೆ ಮಳವಳ್ಳಿ ತಾಲೂಕಿನ ಹಲಗೂರು ವ್ಯಾಪ್ತಿಯಲ್ಲಿ ಬಿರುಸಿನ ಪ್ರಚಾರ ಮಾಡಿದ್ದಾರೆ. ಹಲಗೂರಿಗೆ ಬಂದ ಡಿ.ಕೆ.ಶಿವಕುಮಾರ್‌ಗೆ ಅಭಿಮಾನಿಗಳು ಬೃಹತ್ ಸೇಬಿನ ಹಾರ ಹಾಕಿ ಸ್ವಾಗತ ಕೋರಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಡಿ.ಕೆ. ಶಿವಕುಮಾರ್

ಕನಕಪುರ ಕಡೆಯಿಂದ ಆಗಮಿಸಿದ ಡಿಕೆಶಿ, ಮೊದಲು ರೋಡ್ ಶೋ ಮಾಡಿದರು. ನಂತರ ಪ್ರಮುಖ ವೃತ್ತದಲ್ಲಿ ಭಾಷಣ ಮಾಡಿ ಮತಯಾಚನೆ ಮಾಡಿದರು. ಪ್ರಚಾರದ ವೇಳೆ ಮಾತನಾಡಿ, ನಾನು ನನ್ನ ಎಲ್ಲಾ ಕಾಂಗ್ರೆಸ್ಸಿಗರಿಗೆ ಕೈ ಮುಗಿದು, ಕಾಲು ಮುಗಿದು ಕೇಳಿಕೊಳ್ತೀನಿ. ತಪ್ಪು ಮಾಡಲು ಹೋಗಬೇಡಿ. ಈ ರಾಜ್ಯದ ಮುಖ್ಯಮಂತ್ರಿ ನಿಮ್ಮ ಮನೆ ಬಾಗಿಲಿಗೆ ಬಂದು ವೋಟ್ ಕೇಳುತ್ತಿದ್ದಾರೆ. ನಾನು ಇಲ್ಲಿರುವ ಕಾಂಗ್ರೆಸ್- ಜೆಡಿಎಸ್ ಕಾರ್ಯಕರ್ತರಿಗೆ ಹೇಳ್ತಿನಿ. ನನ್ನ ಮನೆ ಬಾಗಿಲು ಯಾವಾಗಲು ತೆಗೆದಿರತ್ತೆ, ಬಂದು ನಿಮ್ಮ ಕೆಲಸ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದರು.

ನಿಮ್ಮಲ್ಲಿ ನಮ್ರತೆಯಿಂದ ಕೇಳಿಕೊಳ್ಳುತ್ತೇನೆ. ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

For All Latest Updates

ABOUT THE AUTHOR

...view details